Select Your Language

Notifications

webdunia
webdunia
webdunia
webdunia

ಭಾರತ-ಬಾಂಗ್ಲಾ ಟೆಸ್ಟ್ ಕುತೂಹಲಕಾರಿ ಘಟ್ಟದಲ್ಲಿ

ಭಾರತ-ಬಾಂಗ್ಲಾ ಟೆಸ್ಟ್ ಕುತೂಹಲಕಾರಿ ಘಟ್ಟದಲ್ಲಿ
ಚಿತ್ತಗಾಂಗ್ , ಶನಿವಾರ, 17 ಡಿಸೆಂಬರ್ 2022 (17:03 IST)
ಚಿತ್ತಗಾಂಗ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಕುತೂಹಲಕಾರೀ ಘಟ್ಟ ತಲುಪಿದೆ.

ಈ ಪಂದ್ಯ ಗೆಲ್ಲಲು ಟೀಂ ಇಂಡಿಯಾ ಎದುರಾಳಿಗಳಿಗೆ 513 ರನ್ ಗಳ ಗುರಿ ನೀಡಿತ್ತು. ಅದನ್ನು ಬೆನ್ನಟ್ಟಿರುವ ಬಾಂಗ್ಲಾ ದಿಟ್ಟ ಹೋರಾಟ ನಡೆಸಿದೆ. ನಾಲ್ಕನೇ ದಿನದಂತ್ಯಕ್ಕೆ ಬಾಂಗ್ಲಾ 6 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ. ಶಕೀಬ್ ಅಲ್ ಹಸನ್ 40, ಮೆಹದಿ ಹಸನ್ 9 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇಂದು ಆರಂಭದ ಅವಧಿಯಲ್ಲಿ ಬಾಂಗ್ಲಾ ಉತ್ತಮ ಬ್ಯಾಟಿಂಗ್ ನಡೆಸಿತು. ಆರಂಭಿಕ ಝಾಕಿರ್ ಹಸನ್ 100 ರನ್ ಗಳಿಸಿದರು. ಭಾರತದ ಪರ ಅಕ್ಸರ್ ಪಟೇಲ್ 3, ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್ ತಲಾ 1 ವಿಕೆಟ್ ಕಬಳಿಸಿದರು. ಇದೀಗ ಬಾಂಗ್ಲಾ 241 ರನ್ ಗಳಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಕ್ಕಿಂತ ಬುಮ್ರಾಗೆ ಐಪಿಎಲ್ ಮುಖ್ಯ: ನೆಟ್ಟಿಗರ ಟೀಕೆ