ಢಾಕಾ: ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಗೆಲುವಿನ ರೂವಾರಿಯಾಗಿದ್ದ ಬಾಂಗ್ಲಾದೇಶ ಬೌಲರ್ ನಹೀದ್ ರಾಣಾ ಈಗ ಟೀಂ ಇಂಡಿಯಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಇತ್ತೀಚೆಗೆ ಬಾಂಗ್ಲಾದೇಶ ತಂಡ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಗೆಲುವಿನಲ್ಲಿ ನಹೀದ್ ರಾಣಾ ಬೌಲಿಂಗ್ ಕೂಡಾ ಪ್ರಮುಖ ಪಾತ್ರ ವಹಿಸಿತ್ತು. ಗಂಟೆಗೆ 150 ಕಿ.ಮೀ. ವೇಗದಲ್ಲಿ ಚೆಂಡೆಸೆದ ನಹೀದ್ ಪಾಕಿಸ್ತಾನದ ಘಟಾನುಘಟಿ ಬ್ಯಾಟಿಗರಾದ ಬಾಬರ್ ಅಜಮ್, ಶಾನ್ ಮಸೂದ್ ರನ್ನು ಕಟ್ಟಿ ಹಾಕಿದ್ದರು.
ಇದೀಗ ಭಾರತದ ವಿರುದ್ಧದ ಸರಣಿಗೆ ಮುನ್ನ ನಹೀದ್ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಭಾರತ ತಂಡ ಪ್ರಬಲ ತಂಡವೇ ಇರಬಹುದು. ಆದರೆ ಪಂದ್ಯದ ದಿನ ಯಾರು ಚೆನ್ನಾಗಿ ಆಡುತ್ತಾರೋ ಅವರೇ ಗೆಲ್ಲುವುದು ಎಂದು ನಹೀದ್ ರಾಣಾ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಇದಕ್ಕೆ ಮೊದಲು ಮಾತನಾಡಿರುವ ನಹೀದ್ ರಾಣಾ ನಮ್ಮ ತಂಡ ಭಾರತ ಸರಣಿಗೆ ತಯಾರಿ ಆರಂಭಿಸಿದೆ. ಮೈದಾನದಲ್ಲಿ ನಾವು ಅದ್ಭುತ ಪ್ರದರ್ಶನ ನೀಡಲಿದ್ದೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಭಾರತದಲ್ಲಿ ಅದ್ಭುತ ಪ್ರದರ್ಶನ ನೀಡಲು ತುದಿಗಾಲಲ್ಲಿ ನಿಂತಿದ್ದೇನೆ ಎಂದಿದ್ದಾರೆ.