ಹ್ಯಾಂಗ್ ಝೂ: ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಇಂದು ಶುಭಾರಂಭ ಮಾಡಿದೆ. ಎರಡು ಬೆಳ್ಳಿ ಪದಕ ಗೆದ್ದ ಬೆನ್ನಲ್ಲೇ ಭಾರತ ಮಹಿಳಾ ಕ್ರಿಕೆಟ್ ತಂಡವೂ ಮತ್ತೊಂದು ಪದಕ ಖಾತ್ರಿಗೊಳಿಸಿದೆ.
ಬಾಂಗ್ಲಾದೇಶ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ 8 ವಿಕೆಟ್ ಗಳಿಂದ ಗೆದ್ದ ಭಾರತ ತಂಡ ಫೈನಲ್ ಗೇರಿದೆ. ಇದರೊಂದಿಗೆ ಫೈನಲ್ ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸುವ ಅವಕಾಶ ಪಡೆದಿದೆ.
ಇಂದಿನ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 17.5 ಓವರ್ ಗಳಲ್ಲಿ 51 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಮಾರಕ ದಾಳಿ ಸಂಘಟಿಸಿದ ಪೂಜಾ ವಸ್ತ್ರಾಕರ್4 ವಿಕೆಟ್ ಕಬಳಿಸಿದರು.
ಈ ಸುಲಭ ಮೊತ್ತ ಬೆನ್ನತ್ತಿದ ಭಾರತಕ್ಕೆ ಸ್ಮೃತಿ ಮಂದನ-ಶಫಾಲಿ ವರ್ಮ ಉತ್ತಮ ಆರಂಭ ನೀಡುವ ಸೂಚನೆಯಿತ್ತರೂ 7 ರನ್ ಗಳಿಸಿದ್ದ ಸ್ಮೃತಿ ಔಟಾಗಿ ನಿರ್ಗಮಿಸಿದರು. ಇನ್ನೊಂದೆಡೆ ಕೆಲವು ಉತ್ತಮ ಹೊಡೆತಗಳ ಮೂಲಕ ರಂಜಿಸಿದ ಶಫಾಲಿ ವರ್ಮ 17 ರನ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಬಳಿಕ ಫಾರ್ಮ್ ನಲ್ಲಿರುವ ಬ್ಯಾಟಿಗ ಜೆಮಿಮಾ ರೊಡ್ರಿಗಸ್ ಅಜೇಯ 20 ಮತ್ತು ಕನಿಕಾ ಅಹುಜಾ 1 ರನ್ ಗಳಿಸಿ ತಂಡಕ್ಕೆ ಗೆಲುವು ನೀಡಿದರು. ಅಂತಿಮವಾಗಿ ಭಾರತ 8.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿ ಗೆಲುವು ಕಂಡಿತು.