Publish Date: Sun, 24 Sep 2023 (08:20 IST)
Updated Date: Sun, 24 Sep 2023 (08:42 IST)
ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಇಂದು ಬೆಳಿಗ್ಗೆಯೇ ಭಾರತ ಎರಡು ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಶುಭಾರಂಭ ಮಾಡಿದೆ.
ಮಹಿಳೆಯರ 10 ಮೀ. ಏರ್ ರೈಫಲ್ ಗ್ರೂಪ್ ಈವೆಂಟ್ ನಲ್ಲಿ ಭಾರತದ ರಮಿತಾ, ಮೆಹುಲಿ ಘೋಷ್ ಮತ್ತು ಚೌಕ್ಸಿ ರಜತ ಪದಕ ಗೆದ್ದುಕೊಂಡಿದ್ದಾರೆ.
ಇದಾದ ಕೆಲವೇ ಹೊತ್ತಿನಲ್ಲಿ ರೋಯಿಂಗ್ ನಲ್ಲಿ ಭಾರತದ ಅರ್ಜುನ್ ಲಾಲ್ ಜತ್ ಮತ್ತು ಅರವಿಂದ್ ಜೋಡಿ ಮತ್ತೊಂದು ಬೆಳ್ಳಿ ಪದಕ ಗೆದ್ದುಕೊಟ್ಟಿದೆ. ಇದರೊಂದಿಗೆ ಇಂದು ಬೆಳಿಗ್ಗೆಯೇ ಎರಡು ಪದಕ ಭಾರತದ ಪಾಲಾಗಿದೆ.