Select Your Language

Notifications

webdunia
webdunia
webdunia
webdunia

ವಿಶ್ವಕಪ್ ತಂಡ ಸೇರಲು ಸಾಹಸ: ಮಧ್ಯ ರಾತ್ರಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿದ ರವಿಚಂದ್ರನ್ ಅಶ್ವಿನ್!

ವಿಶ್ವಕಪ್ ತಂಡ ಸೇರಲು ಸಾಹಸ: ಮಧ್ಯ ರಾತ್ರಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿದ ರವಿಚಂದ್ರನ್ ಅಶ್ವಿನ್!
ಮೊಹಾಲಿ , ಶನಿವಾರ, 23 ಸೆಪ್ಟಂಬರ್ 2023 (08:20 IST)
Photo Courtesy: Twitter
ಮೊಹಾಲಿ: ವಿಶ್ವಕಪ್ ತಂಡ ಸೇರಲೇಬೇಕೆಂದು ಪಣ ತೊಟ್ಟಿರುವ ರವಿಚಂದ್ರನ್ ಅಶ್ವಿನ್ ರಾತ್ರೋ ರಾತ್ರಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ!

ಈಗಾಗಲೇ ಘೋಷಣೆಯಾಗಿರುವ ವಿಶ್ವಕಪ್ ತಂಡದಲ್ಲಿ ಅಶ್ವಿನ್ ಸ್ಥಾನ ಪಡೆದಿಲ್ಲ. ಆದರೆ ಅಕ್ಸರ್ ಪಟೇಲ್ ಗಾಯಗೊಂಡಿರುವುದರಿಂದ ಅವರು ಚೇತರಿಸಿಕೊಳ್ಳದೇ ಇದ್ದರೆ ಅಶ್ವಿನ್ ಗೆ ಅವಕಾಶ ಸಿಗಲಿದೆ. ಇದಕ್ಕಾಗಿ ಅವರಿಗೆ ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ಸರಣಿ ಉತ್ತಮ ವೇದಿಕೆಯಾಗಿದೆ. ಹೀಗಾಗಿ ಈ ಸರಣಿಯಲ್ಲಿ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿ ತಾನು ಆಲ್ ರೌಂಡರ್ ಸ್ಥಾನ ತುಂಬಬಲ್ಲೆ ಎಂದು ಮ್ಯಾನೇಜ್ ಮೆಂಟ್ ಗಮನ ಸೆಳೆಯಲು ಹರಸಾಹಸ ಪಡುತ್ತಿದ್ದಾರೆ.

ಇದೇ ಕಾರಣಕ್ಕೆ ನಿನ್ನೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಗೆಲುವಿನ ಬಳಿಕ ಇತರ ಆಟಗಾರರ ಜೊತೆ ಸಂಭ್ರಮಿಸುತ್ತಾ ಕೂರದೇ ಮೈದಾನದಲ್ಲಿ ಬ್ಯಾಟ್, ಪ್ಯಾಡ್ ಕಟ್ಟಿಕೊಂಡು ಅಭ್ಯಾಸ ನಡೆಸುತ್ತಿದ್ದುದು ಗಮನಕ್ಕೆ ಬಂತು. ಅವರಿಗೆ ಕೋಚ್ ದ್ರಾವಿಡ್ ಕೂಡಾ ಸಾಥ್ ನೀಡಿದ್ದರು!

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಗೆದ್ದ ಟೀಂ ಇಂಡಿಯಾ ಈಗ ನಂ.1 ಟೀಂ