Publish Date: Fri, 22 Sep 2023 (16:02 IST)
Updated Date: Fri, 22 Sep 2023 (16:05 IST)
ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆಸೀಸ್ ಇತ್ತೀಚೆಗಿನ ವರದಿ ಬಂದಾಗ 34 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದೆ.
ಆಸೀಸ್ ಗೆ ಆರಂಭದಲ್ಲೇ ಭಾರತೀಯ ವೇಗಿಗಳು ಕಡಿವಾಣ ಹಾಕಿದರು. ಮೊಹಮ್ಮದ್ ಶಮಿ ಆರಂಭದಲ್ಲೇ ಮಿಚೆಲ್ ಮಾರ್ಷ್ ವಿಕೆಟ್ ಕಿತ್ತು ಆಘಾತವಿಕ್ಕಿದರು. ಬಳಿಕ ಜಸ್ಪ್ರೀತ್ ಬುಮ್ರಾ ಕೂಡಾ ಆರಂಭದ ಎರಡು ಓವರ್ ಮೇಡನ್ ಮಾಡಿ ರನ್ ನಿಯಂತ್ರಿಸಿದರು.
ಆದರೆ ಈ ನಡುವೆ ಡೇವಿಡ್ ವಾರ್ನರ್ 52 ರನ್ ಗಳಿಸಿದರು. ಅವರ ವಿಕೆಟ್ ರವೀಂದ್ರ ಜಡೇಜಾ ಪಾಲಾಯಿತು. ಬಳಿಕ ಬಂದ ಸ್ಟೀವ್ ಸ್ಮಿತ್ ಕೂಡಾ 41 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಲಬುಶೇನ್ 39 ರನ್ ಗಳಿಸಿ ಉತ್ತಮ ಲಯದಲ್ಲಿದ್ದಾಗ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರು. ಇದೀಗ 19 ರನ್ ಗಳಿಸಿರುವ ಕ್ಯಾಮರೂನ್ ಗ್ರೀನ್ ಮತ್ತು 2 ರನ್ ಗಳಿಸಿರುವ ಇಂಗ್ಲಿಸ್ ಕ್ರೀಸ್ ನಲ್ಲಿದ್ದಾರೆ. ಭಾರತದ ಪರ ಮೊಹಮ್ಮದ್ ಶಮಿ 2, ಜಡೇಜಾ, ಅಶ್ವಿನ್ ತಲಾ 1 ವಿಕೆಟ್ ಕಬಳಿಸಿದ್ದಾರೆ.