Publish Date: Sat, 23 Sep 2023 (08:30 IST)
Updated Date: Sat, 23 Sep 2023 (08:37 IST)
ಮುಂಬೈ: ಏಕದಿನ ವಿಶ್ವಕಪ್ ಗೆ ಮೊದಲು ಕ್ರಿಕೆಟ್ ನಿಂದ ಕಿರು ಬ್ರೇಕ್ ಪಡೆದಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಪತ್ನಿ, ಮಗಳ ಜೊತೆ ಸುಂದರ ಪರಿಸರ ತಾಣದಲ್ಲಿ ರೋಹಿತ್ ರಜಾ ದಿನವನ್ನು ಕಳೆಯುತ್ತಿದ್ದಾರೆ. ಪತ್ನಿ ಜೊತೆ ಪ್ರಕೃತಿ ಮಧ್ಯೆ ಇರುವ ಫೋಟೋ ಹಾಗೂ ಮಗಳ ಜೊತೆ ಪೈಂಟಿಂಗ್ ಮಾಡುತ್ತಿರುವ ಫೋಟೋವೊಂದನ್ನು ರೋಹಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸದ್ಯಕ್ಕೆ ಬ್ರೇಕ್ ನಲ್ಲಿರುವ ರೋಹಿತ್ ಶರ್ಮಾ ಸೆಪ್ಟೆಂಬರ್ 27 ರಂದು ನಡೆಯಲಿರುವ ಭಾರತ-ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯದ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.