Publish Date: Mon, 04 Sep 2023 (15:35 IST)
Updated Date: Mon, 04 Sep 2023 (15:43 IST)
ಪಲ್ಲಿಕೆಲೆ: ನೇಪಾಳ ವಿರುದ್ಧ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಆದರೆ ಭಾರತದ ಕಳಪೆ ಫೀಲ್ಡಿಂಗ್ ನಿಂದಾಗಿ ನೇಪಾಳ ಉತ್ತಮ ಆರಂಭ ಪಡೆಯಿತು. ಇತ್ತೀಚೆಗಿನ ವರದಿ ಬಂದಾಗ 8 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 42 ರನ್ ಗಳಿಸಿದೆ.
ಟೀಂ ಇಂಡಿಯಾ ಆರಂಭದ ನಾಲ್ಕು ಓವರ್ ಗಳಲ್ಲಿ ಮೂರು ಕ್ಯಾಚ್ ಡ್ರಾಪ್ ಮಾಡಿದ್ದು ಕಳಪೆ ಫೀಲ್ಡಿಂಗ್ ಗೆ ಸಾಕ್ಷಿ. ವಿಕೆಟ್ ಕೀಪರ್ ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಸುಲಭದ ಕ್ಯಾಚ್ ಗಳನ್ನು ಕೈ ಚೆಲ್ಲಿದರು. ಇಂದು ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಕಳೆದ ಪಂದ್ಯದಲ್ಲಿ ಆಡಿದ್ದ ತಂಡವೇ ಕಣಕ್ಕಿಳಿದಿದೆ.