Asia Cup Cricket: ಈ ವ್ಯಕ್ತಿ ಟ್ರೋಫಿ ಕೊಟ್ರೆ ಸ್ವೀಕರಿಸೋದೇ ಇಲ್ವಂತೆ ಟೀಂ ಇಂಡಿಯಾ

Krishnaveni K
ಮಂಗಳವಾರ, 16 ಸೆಪ್ಟಂಬರ್ 2025 (10:07 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯನ್ನು ಒಂದು ವೇಳೆ ಗೆದ್ದರೆ ಈ ವ್ಯಕ್ತಿ ಟ್ರೋಫಿ ಕೊಡುವುದಾದರೆ ಸ್ವೀಕರಿಸೋದೇ ಇಲ್ಲ ಎಂದು ಟೀಂ ಇಂಡಿಯಾ ತೀರ್ಮಾನಿಸಿದೆಯಂತೆ.

ಏಷ್ಯಾ ಕಪ್ ಆಯೋಜಿಸುವುದು ಏಷ್ಯನ್ ಕ್ರಿಕೆಟ್ ಸಮಿತಿ. ಏಷ್ಯಾ ಕ್ರಿಕೆಟ್ ಸಮಿತಿಗೆ ಈಗ ಪಾಕಿಸ್ತಾನದ ಮೊಹ್ಸಿನ್ ನಖ್ವಿ ಅಧ್ಯಕ್ಷ. ಈಗಾಗಲೇ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕೈ ಕುಲುಕುವುದಕ್ಕೇ ಹಿಂಜರಿದಿದ್ದರು.

ಇದೀಗ ಟೀಂ ಇಂಡಿಯಾ ಫೈನಲ್ ಗೆದ್ದರೆ ಸಂಪ್ರದಾಯದ ಪ್ರಕಾರ ಎಸಿಸಿ ಅಧ್ಯಕ್ಷರ ಬಳಿಯೇ ಪ್ರಶಸ್ತಿ ಸ್ವೀಕರಿಸಬೇಕು. ಅಂದರೆ ಮೊಹ್ಸಿನ್ ನಖ್ವಿಯೇ ಪ್ರಶಸ್ತಿ ನೀಡಬೇಕು. ಆದರೆ ಅವರ ಕೈಯಿಂದ ಪ್ರಶಸ್ತಿ ಸ್ವೀಕರಿಸದೇ ಇರಲು ಟೀಂ ಇಂಡಿಯಾ ನಿರ್ಧರಿಸಿದೆ.

ಹೀಗಾಗಿ ಟೀಂ ಇಂಡಿಯಾ ಫೈನಲ್ ಗೆದ್ದರೆ ಮತ್ತೊಂದು ಡ್ರಾಮಾ ನಡೆಯುವುದು ಖಚಿತವಾಗಿದೆ. ಅಥವಾ ಸ್ವತಃ ಮೊಹ್ಸಿನ್ ಅವರೇ ಮುಜುಗರ ತಪ್ಪಿಸಲು ಟ್ರೋಫಿ ಪ್ರಧಾನ ಮಾಡುವುದರಿಂದ ಹಿಂದೆ ಸರಿಯುತ್ತಾರಾ ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs PAK: ಕೈಕುಲುಕುವ ವಿವಾದಕ್ಕೆ ಕೊನೆಗೂ ಸ್ಪಷ್ಟನೆ ಕೊಟ್ಟ ಬಿಸಿಸಿಐ

Asian Cup2025: ಹ್ಯಾಂಡ್‌ಶೇಕ್ ಮಾಡದ ಭಾರತ, ಐಸಿಸಿ ಕದ ತಟ್ಟಿದ ಪಾಕ್‌

ಪಾಕಿಸ್ತಾನ ಆಟಗಾರರ ಕೈಕುಲದಂತೆ ಟೀಂ ಇಂಡಿಯಾಗೆ ಐಡಿಯಾ ಕೊಟ್ಟಿದ್ದು ಇದೇ ವ್ಯಕ್ತಿ

ಮ್ಯಾಚ್ ಲೈವ್ ಇತ್ತು ಬಚಾವ್, ಇಲ್ಲದಿದ್ರೆ ನಾವೇ ಗೆದ್ದಿದ್ದು ಅಂತ ಹೇಳ್ತಿತ್ತು ಪಾಕಿಸ್ತಾನ

ನೀವ್ಯಾಕೆ ಪಾಕಿಸ್ತಾನಕ್ಕೆ ಅವಮಾನ ಮಾಡಿದ್ರಿ ಎಂದಾಗ ಸೂರ್ಯಕುಮಾರ್ ಯಾದವ್ ಉತ್ತರ ಏನಿತ್ತು ನೋಡಿ

ಮುಂದಿನ ಸುದ್ದಿ
Show comments