Asia Cup Cricket: ಹೈಡ್ರಾಮಾ ಮಾಡಿ ಯುಎಇ ವಿರುದ್ಧ ಆಡಲು ಕೊನೆಗೂ ಮೈದಾನಕ್ಕೆ ಬಂದ ಪಾಕಿಸ್ತಾನ

Krishnaveni K
ಬುಧವಾರ, 17 ಸೆಪ್ಟಂಬರ್ 2025 (20:30 IST)
Photo Credit: X
ದುಬೈ: ಏಷ್ಯಾ ಕಪ್ ಕ್ರಿಕೆಟ್ 2025 ರಲ್ಲಿ ಹೈಡ್ರಾಮಾ ಬಳಿಕ ಕೊನೆಗೂ ಪಾಕಿಸ್ತಾನ ತಂಡ ಯುಎಇ ವಿರುದ್ಧ ಪಂದ್ಯವಾಡಲು 1 ಗಂಟೆ ತಡವಾಗಿ ಮೈದಾನಕ್ಕೆ ಬಂದಿದೆ.

ಭಾರತದ ವಿರುದ್ಧದ ಪಂದ್ಯದಲ್ಲಿ ಕೈ ಕುಲುಕುವ ವಿಚಾರವಾಗಿ ನಡೆದ ವಿವಾದ ಪಾಕಿಸ್ತಾನ ತಂಡವನ್ನು ರೊಚ್ಚಿಗೇಳಿಸಿದೆ. ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸಬೇಕೆಂದು ಐಸಿಸಿ ಮುಂದೆ ಬೇಡಿಕೆಯಿಟ್ಟರೂ ಐಸಿಸಿ ಇದನ್ನು ತಿರಸ್ಕರಿಸಿತ್ತು.

ಹೀಗಾಗಿ ಇಂದಿನ ಪಂದ್ಯಕ್ಕೆ ನಿಗದಿತ ಸಮಯವಾದರೂ ಪಾಕ್ ತಂಡ ಬಂದಿರಲಿಲ್ಲ. ಹೀಗಾಗಿ ಕೂಟ ಬಹಿಷ್ಕರಿಸಲು ತೀರ್ಮಾನಿಸಿದೆಯೇ ಎಂಬ ಅನುಮಾನ ಮೂಡಿತ್ತು. ಈ ಬಗ್ಗೆ ತೀರ್ಮಾನಿಸಲು 1 ಗಂಟೆ ಕಾಲಾವಕಾಶವನ್ನು ಪಾಕಿಸ್ತಾನ್ ಕೇಳಿತ್ತು ಎನ್ನಲಾಗಿದೆ.

ಹೀಗಾಗಿ ನಿಗದಿತ ಸಮಯಕ್ಕೆ ಪಂದ್ಯ ಶುರುವಾಗಿಲ್ಲ. ಈಗಷ್ಟೇ ಪಾಕಿಸ್ತಾನ ತಂಡದ ಬಸ್ ಮೈದಾನದತ್ತ ಬಂದಿದೆ. ಹೀಗಾಗಿ ಪಂದ್ಯ ತಡವಾಗಿ ಆರಂಭವಾಗಲಿದೆ. ಐಸಿಸಿ ಮತ್ತು ಪಿಸಿಬಿ ಮ್ಯಾಚ್ ರೆಫರಿ ಬಗ್ಗೆ ತುರ್ತು ಸಭೆ ನಡೆಸಿದ ಬಳಿಕ ಪಾಕ್ ಪಂದ್ಯವಾಡಲು ಒಪ್ಪಿಕೊಂಡಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಮಂಧಾನ, ಪಾಲಾಶ್ ಮುಚ್ಚಲ್ ಹೊಸ ಮದುವೆ ದಿನಾಂಕ ಫಿಕ್ಸ್

ವಿವಾದಗಳ ಬೆನ್ನಲ್ಲೇ ಏರ್ ಪೋರ್ಟ್ ನಲ್ಲಿ ಆಯ್ಕೆ ಸಮಿತಿಯ ಪ್ರಗ್ಯಾನ್ ಓಝಾ ಜೊತೆ ಕೊಹ್ಲಿ ಗಂಭೀರ ಚರ್ಚೆ video

ವಿರಾಟ್ ಕೊಹ್ಲಿ ಶತಕ ಸಿಡಿಸಿದಾಗ ಅಗ್ರೆಸಿವ್ ಆಗಿ ರೋಹಿತ್ ಶರ್ಮಾ ಹೇಳಿದ್ದೇನು: ಕೊನೆಗೂ ರಿವೀಲ್

ಗೌತಮ್ ಗಂಭೀರ್ ವಿರುದ್ಧ ಸೀನಿಯರ್ ಆಟಗಾರರು ಸಿಟ್ಟಾಗಿರುವುದಕ್ಕೆ ಕಾರಣ ಬಯಲು

ವಿರಾಟ್ ಕೊಹ್ಲಿ, ಧೋನಿ ಮೇಲೆ ಗೌತಮ್ ಗಂಭೀರ್ ಗೆ ವೈಮನಸ್ಯ ಹುಟ್ಟಿಕೊಂಡಿದ್ದು ಇದೇ ಕಾರಣಕ್ಕಾ

ಮುಂದಿನ ಸುದ್ದಿ
Show comments