ಏಷ್ಯಾ ಕಪ್ 2025: ಭಾರತಕ್ಕೆ ಇಂದು ಯುಎಇ ಎದುರಾಳಿ, ಎಷ್ಟು ಗಂಟೆಗೆ ಮ್ಯಾಚ್

Krishnaveni K
ಬುಧವಾರ, 10 ಸೆಪ್ಟಂಬರ್ 2025 (08:34 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ಮೊದಲ ಪಂದ್ಯವನ್ನು ಅತಿಥೇಯ ಯುಎಇ ವಿರುದ್ಧ ಆಡಲಿದೆ. ಇಂದಿನ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ ಇಲ್ಲಿದೆ ಸಂಪೂರ್ಣ ವಿವರ.
 

ಬಹಳ ದಿನಗಳ ನಂತರ ಟೀಂ ಇಂಡಿಯಾ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೆ ಕ್ರಿಕೆಟ್ ಪಂದ್ಯ ನೋಡುವ ಅವಕಾಶ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆದ ಬಳಿಕ ಬಹುದಿನಗಳ ಬ್ರೇಕ್ ಪಡೆದಿದ್ದ ಟೀಂ ಇಂಡಿಯಾ ಈಗ ಹೊಸ ಸವಾಲಿಗೆ ಸಿದ್ಧವಾಗಿದೆ.

ಏಷ್ಯಾ ಕಪ್ ನಲ್ಲಿ ಇದುವರೆಗೂ ಭಾರತದ್ದೇ ಆಧಿಪತ್ಯ. ಈ ಬಾರಿಯೂ ಭಾರತವೇ ಗೆಲ್ಲುವ ಫೇವರಿಟ್ ಆಗಿದೆ. ಈ ಪಂದ್ಯಕ್ಕೆ ಭಾರತದ ಆರಂಭಿಕರಾಗಿ ಶುಭಮನ್ ಗಿಲ್-ಅಭಿಷೇಕ್ ಶರ್ಮಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಹೀಗಾದಲ್ಲಿ ಸಂಜು ಸ್ಯಾಮ್ಸನ್ ಬೆಂಚ್ ಕಾಯಿಸಬೇಕಾದೀತು.

ಭಾರತ ತಂಡ ಯುವ ತಂಡವೇ ಆಗಿದ್ದರೂ ಟಿ20 ಸ್ಪೆಷಲಿಸ್ಟ್ ಗಳನ್ನೇ ಹೊಂದಿದೆ. ಮಧ್ಯಮ ಕ್ರಮಾಂಕಕ್ಕೆ ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ ಇದ್ದರೆ ಕೆಳ ಕ್ರಮಾಂಕಕ್ಕೆ ರಿಂಕು ಸಿಂಗ್, ಜಿತೇಶ್ ಶರ್ಮನಂತಹ ಸ್ಪೋಟಕ ಬ್ಯಾಟರ್ ಗಳಿದ್ದಾರೆ. ಬೌಲಿಂಗ್ ನಲ್ಲೂ ಅರ್ಷ್ ದೀಪ್ ಸಿಂಗ್, ಅಕ್ಸರ್ ಪಟೇಲ್ ನಂತಹ ಬೌಲರ್ ಗಳನ್ನೊಳಗೊಂಡ ತಂಡ ಬಲಿಷ್ಠವಾಗಿದೆ. ಭಾರತದ ಮುಂದೆ ಯುಎಇ ತಂಡ ಏನೇನೂ ಅಲ್ಲ ಎನ್ನಬಹುದು.

ಇನ್ನು, ಯುಎಇನಲ್ಲಿ ಐಪಿಎಲ್ ಆಡಿ ಭಾರತೀಯ ಆಟಗಾರರಿಗೆ ಸಾಕಷ್ಟು ಅನುಭವವಿದೆ. ಇಲ್ಲಿನ ಪಿಚ್ ಗಳು  ಕೊಂಚ ಸ್ಪಿನ್ನರ್ ಗಳಿಗೂ ಸಹಕರಿಸುವುದರಿಂದ ಭಾರತಕ್ಕೆ ಅನುಕೂಲಕರವಾಗಿರಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಸೋನಿ ಸ್ಪೋರ್ಟ್ಸ್ ನೆಟ್ ವರ್ಕ್ ವಾಹಿನಿಗಳಲ್ಲಿ ಅಥವಾ ಸೋನಿ ಲೈವ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli birthday: ಎಂಜಿ ರೋಡ್ ನಲ್ಲಿ ಮೊದಲು ಟ್ಯಾಟೂ ಹಾಕಿಸಿದ್ದ ಕೊಹ್ಲಿ ಆಮೇಲೆ ಮುಚ್ಚಿಟ್ಟಿದ್ದು ಯಾಕೆ

ತಿಲಕ ಬೇಡ ಎಂದ ಸ್ಮೃತಿ ಮಂಧಾನ: ಯಾಕೆ ಹೀಗೆ ನೆಟ್ಟಿಗರ ಪ್ರಶ್ನೆ: video

ಜಯ್ ಶಾ ಎಂದ್ರೆ ಸುಮ್ನೇ ಅಲ್ಲ, ಮಹಿಳಾ ಕ್ರಿಕೆಟ್ ತಾರೆಯರಿಗೆ ಇದಕ್ಕೇ ಜಯ್ ಶಾ ಮೆಲೆ ಪ್ರೀತಿ

ಪ್ರಧಾನಿ ಭೇಟಿಗೆ ಸಿದ್ಧರಾದ ಚಾಂಪಿಯನ್ ಭಾರತ ಮಹಿಳಾ ಕ್ರಿಕೆಟಿಗರು: ಮೋದಿಗೆ ಏನು ಗಿಫ್ಟ್ ಕೊಡಲಿದ್ದಾರೆ

ಹರ್ಮನ್ ಪ್ರೀತ್ ಕೌರ್ ಪಡೆಗಿಲ್ಲ ವಿಕ್ಟರಿ ಪೆರೇಡ್ ಭಾಗ್ಯ: ಇದಕ್ಕೆಲ್ಲಾ ಬೆಂಗಳೂರೇ ಕಾರಣ

ಮುಂದಿನ ಸುದ್ದಿ
Show comments