ವಿರಾಟ್ ಕೊಹ್ಲಿ ಮಗ ಅಕಾಯ್ ಪುಟಾಣಿ ಕೈ ನೋಡಿ ಖುಷಿಪಡಿ

Krishnaveni K
ಶುಕ್ರವಾರ, 9 ಆಗಸ್ಟ್ 2024 (09:54 IST)
Photo Credit: Instagram
ಲಂಡನ್: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿಯ ಪುತ್ರ ಬೇಬಿ ಅಕಾಯ್ ನ ಮೊದಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೋಟೋ ಎಂದರೆ ಮುಖ ನೋಡುವ ಭಾಗ್ಯ ನಿಮಗಿರಲ್ಲ. ಕೇವಲ ಕೈ ನೋಡಿ ಖುಷಿಪಡಬೇಕು.

ಸದ್ಯಕ್ಕೆ ಅನುಷ್ಕಾ ತಮ್ಮಿಬ್ಬರು ಮಕ್ಕಳೊಂದಿಗೆ ಲಂಡನ್ ನಲ್ಲಿಯೇ ನೆಲೆಸಿದ್ದಾರೆ. ವಿರಾಟ್ ಕೊಹ್ಲಿ ಕೂಡಾ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಮಾತ್ರ ಭಾರತ ಅಥವಾ ಬೇರೆ ಕಡೆ ಪ್ರಯಾಣ ಮಾಡುತ್ತಾರೆ. ಇಲ್ಲದೇ ಹೋದಲ್ಲಿ ಅವರೂ ಇತ್ತೀಚೆಗೆ ಲಂಡನ್ ನಲ್ಲಿರುವುದೇ ಹೆಚ್ಚು.

ಲಂಡನ್ ನಲ್ಲಿಯೇ ಅಕಾಯ್ ಜನನವಾಗಿತ್ತು. ಇದೀಗ ಲಂಡನ್ ನಲ್ಲಿ ಬೇಸಿಗೆಯ ಕಾಲ. ಹೀಗಾಗಿ ಬೇಸಿಗೆಯಲ್ಲಿ ಮಕ್ಕಳೊಂದಿಗೆ ಅನುಷ್ಕಾ ಸಮ್ಮರ್ ಔಟಿಂಗ್ ಮಾಡಿದ್ದು, ಈ ಕ್ಷಣವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೂಲ್ ಟಾಫಿಗಳನ್ನು ಹಿಡಿಸಲು ಅಕಾಯ್ ಬರುತ್ತಿರುವಂತೆ ತೋರುತ್ತಿದ್ದು, ಅಕಾಯ್ ನ ಕೈ ಮಾತ್ರ ಕಾಣುವಂತಹ ಫೋಟೋವನ್ನು ಅನುಷ್ಕಾ ಪ್ರಕಟಿಸಿದ್ದಾರೆ.

ಕೊಹ್ಲಿ ದಂಪತಿ ಇದುವರೆಗೆ ತಮ್ಮ ಮಗಳು ವಮಿಕಾ ಫೋಟೋವನ್ನೂ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ. ಜೊತೆಗೆ ಬೇರೆಯವರಿಗೂ ಫೋಟೋ ತೆಗೆಯಲು ಅನುಮತಿ ನೀಡಿಲ್ಲ. ಪುತ್ರನ ವಿಚಾರದಲ್ಲೂ ಅದೇ ನಿಯಮ ಪಾಲಿಸುತ್ತಿದ್ದಾರೆ. ಹಾಗಿದ್ದರೂ ವಮಿಕಾ ಈ ಹಿಂದೆ ತಂದೆ ಕೊಹ್ಲಿ ಪಂದ್ಯವಾಡುವುದನ್ನು ನೋಡಲು ಬಂದಿದ್ದಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಳು. ಆದರೆ ಫೆಬ್ರವರಿಯಲ್ಲಿ ಜನಿಸಿದ್ದ ಮಗ ಅಕಾಯ್ ನನ್ನು ಕೊಹ್ಲಿ ದಂಪತಿ ಒಮ್ಮೆ ಮಾತ್ರ ಭಾರತಕ್ಕೆ ಕರೆತಂದಿದ್ದಾರೆ. ಆದರೆ ಇದುವರೆಗೆ ಆತನ ಕಿರುಬೆರಳನ್ನೂ ಬಹಿರಂಗಪಡಿಸಿರಲಿಲ್ಲ. ಇದೇ ಮೊದಲ ಬಾರಿಗೆ ಕೈ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS: ಟಿ20 ಯಲ್ಲೂ ಆಸ್ಟ್ರೇಲಿಯಾ ಕೈಲಿ ಹೊಡೆಸಿಕೊಂಡ ಟೀಂ ಇಂಡಿಯಾ

ಅಭಿಷೇಕ್‌ ಶರ್ಮಾ ಬ್ಯಾಗ್‌ ನೋಡಿ ಹರ್ಷದೀಪ್‌, ಶುಭ್ಮನ್ ಗಿಲ್ ಹೀಗೇ ಕಾಲೆಳೆಯುವುದಾ

ಹುಡುಗರ ಹೃದಯ ಗೆದ್ದ ಸ್ಮೃತಿ ಮಂಧಾನಗೆ ಮದುವೆ ಫಿಕ್ಸ್‌, ಎಲ್ಲಿ, ಯಾವಾಗ ಇಲ್ಲಿದೆ ಮಾಹಿತಿ

IND vs AUS: ವಿಕೆಟ್ ಮೇಲೆ ವಿಕೆಟ್ ಬಿದ್ದರೂ ಅಭಿಷೇಕ್ ಶರ್ಮಾಗೆ ಕ್ಯಾರೇ ಇಲ್ಲ

ಮತಾಂತರ ಆರೋಪದಿಂದ ಆತಂಕದ ಖಾಯಿಲೆವರೆಗೆ: ಸೆಮಿಫೈನಲ್ ಸ್ಟಾರ್ ಜೆಮಿಮಾ ರೊಡ್ರಿಗಸ್ ಕತೆ

ಮುಂದಿನ ಸುದ್ದಿ
Show comments