Publish Date: Thu, 28 Mar 2024 (15:28 IST)
Updated Date: Thu, 28 Mar 2024 (15:30 IST)
Photo Courtesy: Anushka Sharma Instagram
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಮಗ ಅಕಾಯ್ ಜನನದ ಬಳಿಕ ಇದೇ ಮೊದಲ ಬಾರಿಗೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಅನುಷ್ಕಾ ಇನ್ ಸ್ಟಾಗ್ರಾಂ ಆಗಲೀ ಯಾವುದೇ ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಡೆಲಿವರಿಗಾಗಿ ಪತಿ ಕೊಹ್ಲಿ ಜೊತೆ ಲಂಡನ್ ನಲ್ಲಿಯೇ ನೆಲೆಸಿದ್ದರು. ಹೀಗಾಗಿ ಮಗುವಿನ ಲಾಲನೆ-ಪಾಲನೆಯಲ್ಲಿ ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದರು.
ಆದರೆ ಇದೀಗ ಅಕಾಯ್ ಜನನವಾಗಿ ಒಂದೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಬೆಳಗಿನ ಸೂರ್ಯನ ಜೊತೆಗೆ ನನ್ನ ಒನ್ ಪ್ಲಸ್ ಓಪನ್ ನಲ್ಲಿ ಓದುವ ಸಮಯ. ದಿನ ಆರಂಭಿಸಲು ಇದಕ್ಕಿಂತ ಸುಂದರ ದಾರಿ ಇದೆಯೇ ಎಂದು ಅಡಿಬರಹವೊಂದನ್ನು ಬರೆದಿದ್ದಾರೆ.
ಸದ್ಯಕ್ಕೆ ಅನುಷ್ಕಾ ಮಕ್ಕಳ ಜೊತೆ ಲಂಡನ್ ನಲ್ಲಿಯೇ ಇದ್ದಾರೆ. ವಿರಾಟ್ ಕೊಹ್ಲಿ ಮಾತ್ರ ಐಪಿಎಲ್ ನಲ್ಲಿ ಭಾಗಿಯಾಗಲು ಇತ್ತೀಚೆಗಷ್ಟೇ ಭಾರತಕ್ಕೆ ಬಂದಿದ್ದರು. ಎರಡು ತಿಂಗಳ ಕಾಲ ಯಾರ ಕೈಗೂ ಸಿಗದ, ಯಾರೂ ಗುರುತು ಸಿಗದ ಜಾಗದಲ್ಲಿ ಕಾಲ ಕಳೆದಿದ್ದಾಗಿ ಕೊಹ್ಲಿ ಇತ್ತೀಚೆಗೆ ಹೇಳಿಕೊಂಡಿದ್ದರು.