Select Your Language

Notifications

webdunia
webdunia
webdunia
webdunia

‘ಜಂಬೋ’ ಅನಿಲ್ ಕುಂಬ್ಳೆಗೆ ಬರ್ತ್ ಡೇ ಸಂಭ್ರಮ

‘ಜಂಬೋ’ ಅನಿಲ್ ಕುಂಬ್ಳೆಗೆ ಬರ್ತ್ ಡೇ ಸಂಭ್ರಮ
ಬೆಂಗಳೂರು , ಭಾನುವಾರ, 17 ಅಕ್ಟೋಬರ್ 2021 (09:55 IST)
ಬೆಂಗಳೂರು: ಟೀಂ ಇಂಡಿಯಾ ಕಂಡ ಶ್ರೇಷ್ಠ ಸ್ಪಿನ್ನರ್, ನಾಯಕ ಅನಿಲ್ ಕುಂಬ್ಳೆಗೆ ಇಂದು ಜನ್ಮದಿನದ ಸಂಭ್ರಮ. ಅವರ ಜನ್ಮದಿನಕ್ಕೆ ಕ್ರಿಕೆಟ್ ರಂಗದ ಸ್ನೇಹಿತರು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.


ಟೆಸ್ಟ್ ಕ್ರಿಕೆಟ್ ನಲ್ಲಿ ಒಂದೇ ಇನಿಂಗ್ಸ್ ನಲ್ಲಿ 10 ವಿಕೆಟ್ ಸಾಧನೆ, ಒಟ್ಟು 619 ವಿಕೆಟ್ ಕಬಳಿಸಿದ ಸಾಧನೆ ಮಾಡಿರುವ ಅನಿಲ್ ಕುಂಬ್ಳೆ ನಾಯಕರಾಗಿಯೂ ಟೆಸ್ಟ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾಕ್ಕೆ ಆಸ್ಟ್ರೇಲಿಯಾ ನೆಲದಲ್ಲಿ ಗೆಲುವು ಕೊಡಿಸಿದವರು. ಕೆಲವು ಕಾಲ ಟೀಂ ಇಂಡಿಯಾ ಕೋಚ್ ಆಗಿ ಯಶಸ್ಸು ಕಂಡರೂ ಬಳಿಕ ನಾಯಕ ಕೊಹ್ಲಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಕೋಚ್ ಹುದ್ದೆ ತೊರೆಯಬೇಕಾಯಿತು.

ಇದೀಗ ಐಪಿಎಲ್ ನಲ್ಲಿ ಕಿಂಗ್ಸ್ ಪಂಜಾಬ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಂಬೋ ಎಂದೇ ಖ್ಯಾತರಾಗಿರುವ ಅನಿಲ್ ಕುಂಬ್ಳೆ ಹುಟ್ಟುಹಬ್ಬಕ್ಕೆ ಬಿಸಿಸಿಐ, ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹರ್ಷಲ್ ಪಟೇಲ್, ಅಂಬಟಿ ರಾಯುಡು ಐಪಿಎಲ್ ನಲ್ಲಿ ಮಾಡಿದ ವಿನೂತನ ದಾಖಲೆಗಳು