Webdunia - Bharat's app for daily news and videos

Install App

ವಿಜಯೋತ್ಸವದ ವೇಳೆ ಪ್ರಾಣ ಚೆಲ್ಲಿದ RCB ಕಟ್ಟಾ ಅಭಿಮಾನಿ, ಕುಟುಂಬದ ಪರಿಸ್ಥಿತಿ ಕೇಳಿದ್ರೆ ಕಣ್ಣೀರು ಬರುತ್ತೇ

Sampriya
ಬುಧವಾರ, 4 ಜೂನ್ 2025 (13:31 IST)
Photo Credit X
ಮೂಡಲಗಿ: ಐಪಿಎಲ್‌ 2025ರ ಟ್ರೋಪಿಯನ್ನು ಆರ್‌ಸಿಬಿ ಗೆಲ್ಲುತ್ತಿದ್ದ ಹಾಗೆಯೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಆರ್‌ಸಿಬಿ ಅಭಿಮಾನಿ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. 

ಆರ್‌ಸಿಬಿ ಕಟ್ಟಾ ಅಭಿಮಾನಿಯಾಗಿದ್ದ ಮಂಜುನಾಥ ಈರಪ್ಪ ಕಂಬಾರ (28) ಸಾವಿಗೀಡಾದವರು.

 ಅವರಾದಿ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಕುಣಿಯುತ್ತಲೇ ಅವರು ಕುಸಿದು ಬಿದ್ದಿದ್ದಾನೆ. ಕೂಡಲೇ ಆತನ ಗೆಳೆಯರು ಹತ್ತಿರದ ಮಹಾಲಿಂಗಪೂರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಆತನನ್ನು ಉಳಿಸಿಕೊಳ್ಳಲು
ಸಾಧ್ಯವಾಗಲಿಲ್ಲ. 

ಆರ್‌ಸಿಬಿ ತಂಡದ ಹುಟ್ಟು ಅಭಿಮಾನಿಯಾಗಿರುವ ಮಂಜುಣಾಥ್‌ ಫೈನಲ್‌ ಪಂದ್ಯ ವೀಕ್ಷಣೆಗೆ ಮಂಗಳವಾರ ಬೃಹತ್‌ ಎಲ್‌ಇಡಿ ಪರದೆಯ ವ್ಯವಸ್ಥೆಯನ್ನು ಅವರೇ ಮಾಡಿದ್ದರು. ಇದಕ್ಕಾಗಿ ನಾಲ್ಕು ದಿನಗಳಿಂದ ಊಟ, ನಿದ್ದೆ ಬಿಟ್ಟು ಓಡಾಡಿದ್ದರು. ಪಟಾಕಿ, ಗುಲಾಲು ಎಲ್ಲವನ್ನು ಖರೀದಿಸಿ ತಂದಿದ್ದರು.

ಗ್ರಾಮದಲ್ಲಿ ‘ಅವರಾದಿ ವಾರಿಯರ್ಸ್‌’ ಎಂಬ ತಂಡ ಕಟ್ಟಿಕೊಂಡು ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದರು. ನೆಚ್ಚಿನ ತಂಡ ಕಪ್‌ ಗೆದ್ದಿದ್ದನ್ನು ಕಂಡು ಯುವಕರು ಹುಚ್ಚೆದ್ದು ಕುಣಿದಾಡಿದರು. ಮಂಜುನಾಥ ಕೂಡ ಮೈ ಮರೆತು ಸಂಭ್ರಮಿಸುವಾಗಲೇ ಹೃದಯ ಸ್ತಂಭನವಾಗಿದೆ.

ಮಂಜುನಾಥಗೆ 6 ತಿಂಗಳ ಹೆಣ್ಣ ಮಗು ಇದೆ. ಪತ್ನಿ ಮತ್ತೆ ಗರ್ಭಿಣಿಯಾಗಿದ್ದಾರೆ. ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ತಂದೆ ಈರಪ್ಪ ಕೃಷಿ ಮಾಡಿಕೊಂಡಿದ್ಬಾರೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಹಿಳಾ ಚೆಸ್ ವಿಶ್ವ ಕಪ್ ಗೆದ್ದು ಚಾರಿತ್ರಿಕ ಸಾಧನೆ ಮೆರೆದ ಭಾರತದ ದಿವ್ಯಾ ದೇಶ್‌ಮುಖ್‌

ರಿಷಭ್ ಪಂತ್ ಎದೆಗಾರಿಕೆ, ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಸ್ಫೂರ್ತಿ: ಗೌತಮ್ ಗಂಭೀರ್ ಬಿಚ್ಚುಮಾತು

ನಿಮ್ಗೆ ಸ್ವಿಂಗ್ ಆಡುವ ಯೋಗ್ಯತೆ ಇಲ್ಲ ಎಂದ ಹ್ಯಾರಿ ಬ್ರೂಕ್ ಗೆ ಕೆಎಲ್ ರಾಹುಲ್ ಉತ್ತರ ಏನಿತ್ತು ಗೊತ್ತಾ

Video: ಡ್ರಾ ಮಾಡಿಕೊಳ್ಳೋಣ್ವಾ ಎಂದರೆ ತಡಿ ಸೆಂಚುರಿ ಮಾಡ್ತೀನಿ ಎಂದ ರವೀಂದ್ರ ಜಡೇಜಾ

ಕಾಲಿನ ಬೆರಳು ಮುರಿದರೂ ಮತ್ತೆ ಕಣಕ್ಕೆ ಇಳಿಯಲು ಸಜ್ಜಾದ ರಿಷಭ್‌ ಪಂತ್‌: ಕುತೂಹಲ ಘಟ್ಟದತ್ತ ನಾಲ್ಕನೇ ಟೆಸ್ಟ್‌

ಮುಂದಿನ ಸುದ್ದಿ
Show comments