ಅಹಮ್ಮದಾಬಾದ್: ಐಪಿಎಲ್ 2025 ರ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಕಿಂಗ್ ಕೊಹ್ಲಿ ಮೈದಾನಕ್ಕೆ ಎಂಟ್ರಿ ಕೊಟ್ಟಾಗಿದೆ. ಇದೀಗ ಭಾರತೀಯ ಸೇನೆಗೆ ಗೌರವ ಸಲ್ಲಿಸಲಾಗುತ್ತಿದೆ. 
									
			
			 
 			
 
 			
					
			        							
								
																	ಈಗಾಗಲೇ ಐಪಿಎಲ್ ಫೈನಲ್ ಪಂದ್ಯಕ್ಕೆ ಮುನ್ನ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಬಿಸಿಸಿಐ ಹಮ್ಮಿಕೊಂಡಿತ್ತು. ಅದರಂತೆ ಇಂದು ಮೈದಾನದಲ್ಲಿ ಎಲ್ಲಿ ನೋಡಿದರೂ ಭಾರತದ ಧ್ವಜ, ದೇಶಭಕ್ತಿಯನ್ನು ಬಿಂಬಿಸುವ ಹಾಡುಗಳು, ನೃತ್ಯ ಕಂಡುಬರುತ್ತಿದೆ.
									
										
								
																	ಶಂಕರ್ ಮಹದೇವನ್ ನೇತೃತ್ವದ ಗಾಯಕರ ತಂಡ ಭಾರತ್ ಮಾತಾ ಕೀ ಜೈ ಎಂದು ಜಯಘೋಷದೊಂದಿಗೆ ಭಾರತೀಯ ಸೇನೆಗೆ ಗೌರವ ನಮನ ಸಲ್ಲಿಸಿದೆ. ಮೈದಾನದಲ್ಲಿದ್ದ ತುಂಬಿದ್ದ ಪ್ರೇಕ್ಷಕರೂ ಇದಕ್ಕೆ ಸಾಥ್ ನೀಡಿದ್ದು ಮೈ ರೋಮಾಂಚನಗೊಳಿಸುವಂತಿತತು.
									
											
							                     
							
							
			        							
								
																	ಇನ್ನು ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು ಆಟಗಾರರು ಮೈದಾನಕ್ಕಿಳಿದು ಕೊಂಚ ಅಭ್ಯಾಸವನ್ನೂ ನಡೆಸಿದ್ದಾರೆ. ವಿರಾಟ್ ಕೊಹ್ಲಿ ಮೈದಾನಕ್ಕೆ ಬರುತ್ತಿದ್ದಂತೇ ನೆರೆದಿದ್ದ ಅಭಿಮಾನಿಗಳು ಎದ್ದು ನಿಂತು ಹರ್ಷೋದ್ಗಾರ ನಡೆಸಿದರು. ಈ ಬಾರಿ ಯಾವುದೇ ತಂಡ ಕಪ್ ಗೆದ್ದರೂ ಅದು ದಾಖಲೆಯಾಗಲಿದೆ. ಆರ್ ಸಿಬಿ ಇರಲಿ, ಪಂಜಾಬ್ ಇರಲಿ ಇಂದು ಚೊಚ್ಚಲ ಕಪ್ ಗೆಲ್ಲುವ ಉತ್ಸಾಹದಲ್ಲಿದೆ.