Publish Date: Tue, 03 Jun 2025 (21:13 IST)
Updated Date: Tue, 03 Jun 2025 (21:25 IST)
ಅಹಮಾದಾಬಾದ್: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7ವಿಕೆಟ್ ಕಳೆದುಕೊಂಡು 190ರನ್ ಗಳಿಸಿ, ಪಂಜಾಬ್‌ಗೆ 191 ರನ್‌ಗಳ ಸಾಧಾರಣ ಟಾರ್ಗೆಟ್ ನೀಡಿದೆ.
ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ಮೆಚ್ಚುಗೆ ಗಳಿಸಿತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ದು, ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.
ಸಾಲ್ಟ್ ಬೇಗನೇ ಪೆವೆಲಿಯನ್ ಕಡೆ ಮರಳಿದ್ದರಿಂದ ಆರ್‌ಸಿಬಿಗೆ ಆರಂಭಿಕ ಆಘಾತ ಉಂಟಾಯಿತು. ಕನ್ನಡಿಗ ಮಯಾಂಕ್ ಅಗರ್ವಾಲ್ ಇನ್ನೇನು ಹೊಸ ಕಮಾಲ್ ಮಾಡುತ್ತಾರೆ ಎನ್ನುವಷ್ಟರಲ್ಲಿ ಬೇಗನೇ ಔಟ್ ಆದರು.
ರನ್‌ಮೆಷಿನ್ ವಿರಾಟ್ ಕೊಹ್ಲಿ ಹಾಗೂ ಕ್ಯಾಪ್ಟನ್ ರಜತ್ ಪಟಿದಾರ್ ಉತ್ತಮ ಜತೆಯಾಟದಲ್ಲಿ ಒಳ್ಳೆಯ ರನ್ ಗಳಿಸಿತು. ಕೊನೆಗೂ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಪಂಜಾಬ್‌ಗೆ 191ರನ್‌ಗಳ ಟಾರ್ಗೆಟ್ ನೀಡಿತು.