RCB: ಆರ್ ಸಿಬಿ ತಂಡದ ಮೆರವಣಿಗೆ ಇರುತ್ತೆ ಎಂದುಕೊಂಡವರಿಗೆ ಗೃಹಸಚಿವರಿಂದ ಶಾಕ್

Krishnaveni K
ಬುಧವಾರ, 4 ಜೂನ್ 2025 (13:26 IST)
ಬೆಂಗಳೂರು: ಐಪಿಎಲ್ ಚಾಂಪಿಯನ್ ಆಗಿರುವ ಆರ್ ಸಿಬಿ ತಂಡ ಇಂದು ಸಂಜೆ ವಿಧಾನಸೌಧದಿಂದ ಚಿನ್ನಸ್ವಾಮಿ ಮೈದಾನದವರೆಗೆ ಮೆರವಣಿಗೆಯಿರುತ್ತದೆ ಎಂದು ಅಭಿಮಾನಿಗಳು ಕಾದು ನಿಂತಿದ್ದಾರೆ. ಆದರೆ ಗೃಹಸಚಿವ ಪರಮೇಶ್ವರ್ ಅವರಿಗೆ ಶಾಕ್ ನೀಡಿದ್ದಾರೆ.

ಐಪಿಎಲ್ ನಲ್ಲಿ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಇದೇ ಮೊದಲ ಬಾರಿಗೆ ಆರ್ ಸಿಬಿ ಕಪ್ ಗೆದ್ದಿದೆ. ಸಹಜವಾಗಿಯೇ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಎದಿರುಗೊಳ್ಳಲು ಕಾದು ನಿಂತಿದ್ದಾರೆ. ಈಗಾಗಲೇ ಆರ್ ಸಿಬಿ ಇಂದು ಓಪನ್ ಮೆರವಣಿಗೆ ಇರುತ್ತದೆ ಎಂದು ಪ್ರಕಟಿಸಿತ್ತು.

ಆದರೆ ಇದೀಗ ಗೃಹಸಚಿವರು ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಭದ್ರತಾ ದೃಷ್ಟಿಯಿಂದ ಓಪನ್ ಮೆರವಣಿಗೆ ಇರಲ್ಲ. ಬದಲಾಗಿ ವಿಧಾನಸೌಧದ ಮುಂಭಾಗ ಇಂದು ಸಿಎಂ ಸಿದ್ದರಾಮಯ್ಯ ಆರ್ ಸಿಬಿ ಆಟಗಾರರಿಗೆ ಸನ್ಮಾನ ಮಾಡಲಿದ್ದಾರೆ. ಎಲ್ಲಾ ಆಟಗಾರರು ಬಸ್ ನಲ್ಲಿ ಬರಲಿದ್ದಾರೆ. ಬಳಿಕ ಒಂದಿಬ್ಬರು ಆಟಗಾರರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಬಹುದು. ಇದಾದ ಬಳಿಕ ಎಲ್ಲಾ ಆಟಗಾರರೂ ಸ್ಟೇಡಿಯಂಗೆ ತೆರಳಲಿದ್ದಾರೆ. ಅಲ್ಲಿ ಅಭಿಮಾನಿಗಳಿಗಾಗಿ ಕೆಎಸ್ ಸಿಎ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಗೃಹಸಚಿವರು ಹೇಳಿದ್ದಾರೆ. ಮೈದಾನಕ್ಕೆ ಹೋಗಿ ಆಟಗಾರರ ಸಂಭ್ರಮಾಚರಣೆ ನೋಡಬೇಕು ಎಂದರೆ ಟಿಕೆಟ್ ಕೊಡಬೇಕು. ಮೆರವಣಿಗೆ ಎಂದರೆ ಆಟಗಾರರ ಜೊತೆ ಯಾವುದೇ ಕಟ್ಟಪಾಡು ಇಲ್ಲದೇ ಸಂಭ್ರಮಿಸಬಹುದಿತ್ತು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅದೆಲ್ಲಾ ಈಗ ಸುಳ್ಳಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶುಭಮನ್ ಗಿಲ್ ಹೆಸರಿಗೆ, ರೋಹಿತ್ ರಿಯಲ್ ಕ್ಯಾಪ್ಟನ್: ಈ ವಿಡಿಯೋವೇ ಸಾಕ್ಷಿ

IND vs AUS: ರೋ ಕೊ ಜೋಡಿ ತಡೆಯೋರೇ ಇಲ್ಲ: ಕೊನೆಯ ಪಂದ್ಯ ಗೆದ್ದ ಟೀಂ ಇಂಡಿಯಾ

ಅಯ್ಯೋ.. ರೋಹಿತ್ ಶರ್ಮಾ ಈ ಜಾಗಕ್ಕೇ ಬ್ಯಾಟ್ ಇಡುವ ಧೈರ್ಯ ಕೊಹ್ಲಿಗೆ ಮಾತ್ರ ಎಂದ ಫ್ಯಾನ್ಸ್

ರೋಹಿತ್ ಶರ್ಮಾ ಶತಕ: ನಮ್ದು ಇನ್ನೂ ಕತೆ ಮುಗಿದಿಲ್ಲ ಈಗ ಶುರು ಎಂದ ಹಿಟ್ ಮ್ಯಾನ್

ಮುಂದಿನ ಸುದ್ದಿ
Show comments