Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್‌ ಟ್ರೋಫಿ ಮುಡಿಗೇರಿಸಿಕೊಳ್ಳುವ ತಂಡ ಎಷ್ಟು ಕೋಟಿ ಜೇಬಿಗಿಳಿಸಲಿದೆ ಗೊತ್ತಾ

Champions Trophy Cricket Tournament

Sampriya

ಲಾಹೋರ್‌ , ಶುಕ್ರವಾರ, 14 ಫೆಬ್ರವರಿ 2025 (14:17 IST)
Photo Courtesy X
ಲಾಹೋರ್‌: ಪಾಕಿಸ್ತಾನದ ಆತಿಥ್ಯದಲ್ಲಿ ಇದೇ 19ರಂದು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಟೂರ್ನಿ ನಡೆಯಲಿದೆ. ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಈ ಟೂರ್ನಿಯಲ್ಲಿ ಭಾರತ ಸೇರಿದಂತೆ ಎಂಟು ತಂಡಗಳು ಭಾಗವಹಿಸಲಿವೆ.

ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕಿದ ಕಾರಣ ಭಾರತದ ಪಂದ್ಯಗಳು ಮಾತ್ರ ದುಬೈನಲ್ಲಿ ನಡೆಯಲಿವೆ. ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ಆಯೋಜನೆಗೊಂಡಿವೆ. ಭಾರತ ತಂಡವು ಫೈನಲ್‌ ಪ್ರವೇಶಿಸಿದರೆ ಆ ಪಂದ್ಯವೂ ದುಬೈನಲ್ಲೇ ನಡೆಯಲಿವೆ. ಈ ಟೂರ್ನಿಯಲ್ಲಿ ಗೆದ್ದ ತಂಡವು ಭಾರೀ ಮೊತ್ತದ ಬಹುಮಾನವನ್ನು ಜೇಬಿಗಿಳಿಸಲಿದೆ.

ಚಾಂಪಿಯನ್ಸ್‌ ಟ್ರೋಫಿ ಕಿರೀಟ ಗೆಲ್ಲುವ ತಂಡ ₹ 19.45 ಕೋಟಿ ನಗದು ಬಹುಮಾನ ಪಡೆಯಲಿದೆ. ಇಂದು ಐಸಿಸಿ ಚಾಂಪಿಯನ್‌ ಟ್ರೋಫಿ ನಗದು ಬಹುಮಾನ ಮೊತ್ತವನ್ನು ಪ್ರಕಟಿಸಿದೆ. ರನ್ನರ್-ಅಪ್‌ ತಂಡ ಸುಮಾರು 9.75 ಕೋಟಿ ಬಹುಮಾನ ಪಡೆಯಲಿದೆ.

ಟೂರ್ನಿಯ ಒಟ್ಟು ನಗದು ಬಹುಮಾನ ಮೊತ್ತ 60  ಕೋಟಿ ನಿಗದಿ ಮಾಡಲಾಗಿದೆ. ಕೊನೆಯ ಟೂರ್ನಿ 2017ಕ್ಕೆ ಹೋಲಿಸಿದರೆ ಒಟ್ಟು ನಗದು ಬಹುಮಾನದ ಮೊತ್ತ ಶೇ 53  ಏರಿದೆ.  ಸೆಮಿಫೈನಲ್‌ನಲ್ಲಿ ಸೋತ ತಂಡಗಳು ₹ 4.86 ಕೋಟಿ ಪಡೆಯಲಿವೆ.

ಫೆ.19 ರಿಂದ ಪಂದ್ಯ ಟೂರ್ನಿ ಆರಂಭಗೊಂಡರೆ ಮಾ.9 ರಂದು ಫೈನಲ್‌ ಪಂದ್ಯ ನಡೆಯಲಿದೆ. 2025 ರ ಆವೃತ್ತಿಯಲ್ಲಿ ಎಂಟು ತಂಡಗಳು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ತಂಡವು ಇದೇ 20ರಂದು ಬಾಂಗ್ಲಾದೇಶ ವಿರುದ್ಧ ಅಭಿಯಾನ ಆರಂಭಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿ ಫ್ಯಾನ್ಸ್ ಎಷ್ಟು ಹೊಗಳ್ತಾರೋ, ಅಷ್ಟೇ ಬೈತಾರೆ: ಸ್ಮೃತಿ ಮಂಧನ