Select Your Language

Notifications

webdunia
webdunia
webdunia
webdunia

ಆರ್ ಸಿಬಿ ಫ್ಯಾನ್ಸ್ ಎಷ್ಟು ಹೊಗಳ್ತಾರೋ, ಅಷ್ಟೇ ಬೈತಾರೆ: ಸ್ಮೃತಿ ಮಂಧನ

Smriti Mandhana

Krishnaveni K

ವಡೋದರಾ , ಶುಕ್ರವಾರ, 14 ಫೆಬ್ರವರಿ 2025 (14:10 IST)
ವಡೋದರಾ: ಡಬ್ಲ್ಯುಪಿಎಲ್ ಟೂರ್ನಿ ಇಂದಿನಿಂದ ಆರಂಭವಾಗುತ್ತಿದ್ದು ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಆರ್ ಸಿಬಿ ಮತ್ತು ಗುಜರಾತ್ ಜೈಂಟ್ಸ್ ಮುಖಾ ಮುಖಿಯಾಗಲಿದೆ. ಈ ಪಂದ್ಯಕ್ಕೆ ಮುನ್ನ ಆರ್ ಸಿಬಿ ಫ್ಯಾನ್ಸ್ ಬಗ್ಗೆ ಸ್ಮೃತಿ ಮಂಧನ ಮಾತನಾಡಿದ್ದಾರೆ.

ಡಬ್ಲ್ಯುಪಿಎಲ್ 3 ನೇ ಆವೃತ್ತಿ ಆರಂಭಕ್ಕೆ ಮುನ್ನ ಸ್ಮೃತಿ ಮಂಧನ ಸಂದರ್ಶನದಲ್ಲಿ ಭಾಗಿಯಾಗಿದ್ದು, ಆರ್ ಸಿಬಿ ಅಭಿಮಾನಿಗಳ ಬೆಂಬಲ, ಟೀಕೆಗಳ ಮುಕ್ತವಾಗಿ ಮಾತನಾಡಿದ್ದಾರೆ. ಆರ್ ಸಿಬಿ ಅಭಿಮಾನಿಗಳು ನಮ್ಮನ್ನು ಎಷ್ಟು ಬೆಂಬಲಿಸುತ್ತಾರೋ ತಪ್ಪು ಮಾಡಿದಾಗ ಅಷ್ಟೇ ಟೀಕೆ ಮಾಡುತ್ತಾರೆ ಎಂದಿದ್ದಾರೆ.

‘ಬಹುಶಃ ಆರ್ ಸಿಬಿಗೆ ಇರುವಷ್ಟು ಫ್ಯಾನ್ ಕ್ರೇಜ್ ಯಾವ ತಂಡಕ್ಕೂ ಇಲ್ಲ. ಜಗತ್ತಿನ ಯಾವುದೇ ಮೂಲೆಗೆ ಹೋದರೂ ಆರ್ ಸಿಬಿ ಎಂದು ಕೂಗಿ ಬೆಂಬಲಿಸುವುದನ್ನು ಕೇಳಲು ಯಾರು ಬಯಸುವುದಿಲ್ಲ ಹೇಳಿ? ಈ ಅಭಿಮಾನಿಗಳ ಬೆಂಬಲದಿಂದಲೇ ನಾವು ಚೆನ್ನಾಗಿ ಆಡಲು ಉತ್ಸಾಹ ಹೆಚ್ಚುತ್ತದೆ’ ಎಂದಿದ್ದಾರೆ.

‘ನಮ್ಮ ಸುತ್ತ ಏನಾಗುತ್ತಿದೆ ಎಂಬ ಬಗ್ಗೆ ನಾವು ಹೆಚ್ಚು ಯೋಚಿಸಲ್ಲ. ಒಂದು ತಂಡವಾಗಿ ಉತ್ತಮ ಕ್ರಿಕೆಟ್ ಆಡುವುದಷ್ಟೇ ನಮ್ಮ ಆದ್ಯತೆಯಾಗಿರುತ್ತದೆ. ಯಾಕೆಂದರೆ ಆರ್ ಸಿಬಿ ಫ್ಯಾನ್ಸ್ ಹೇಗೆಂದರೆ ಎಷ್ಟು ಚೆನ್ನಾಗಿ ಬೆಂಬಲಿಸುತ್ತಾರೋ ತಪ್ಪು ಮಾಡಿದಾಗ ಅಷ್ಟೇ ಟೀಕೆ ಮಾಡ್ತಾರೆ. ಬೇರೆ ತಂಡಗಳಿಗೆ ಹೋಲಿಸಿದರೆ ನಮ್ಮ ಅಭಿಮಾನಿಗಳು ಟೀಕೆಯನ್ನೂ ಹೆಚ್ಚು ಮಾಡ್ತಾರೆ. ಹೀಗಾಗಿ ಒಂದು ತಂಡವಾಗಿ ಉತ್ತಮ ಆಟ ಆಡುವುದು ನಮ್ಮ ಗುರಿಯಾಗಿರುತ್ತದೆ’ ಎಂದು ಸ್ಮೃತಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಜತ್ ಪಾಟಿದಾರ್ ಹೆಸರಿಗಷ್ಟೇ ಕ್ಯಾಪ್ಟನ್, ಕಂಟ್ರೋಲ್ ಬಟನ್ ವಿರಾಟ್ ಕೊಹ್ಲಿ