Select Your Language

Notifications

webdunia
webdunia
webdunia
webdunia

ಚಪ್ಪಾಳೆ ತಟ್ಟುವ ಕೆಲಸ ಆಗಾಗ ನಡೆಯುತ್ತಿರಬೇಕು ಎಂದ ಕಿಚ್ಚ ಸುದೀಪ್

ಚಪ್ಪಾಳೆ ತಟ್ಟುವ ಕೆಲಸ ಆಗಾಗ ನಡೆಯುತ್ತಿರಬೇಕು ಎಂದ ಕಿಚ್ಚ ಸುದೀಪ್
ಬೆಂಗಳೂರು , ಸೋಮವಾರ, 23 ಮಾರ್ಚ್ 2020 (10:10 IST)
ಬೆಂಗಳೂರು: ಜನತಾ ಕರ್ಫ್ಯೂ ದಿನವಾದ ನಿನ್ನೆ ಸಂಜೆ 5 ಗಂಟೆಗೆ ಎಲ್ಲರೂ ತಮ್ಮ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಲು ಪ್ರಧಾನಿ ಮೋದಿ ಕರೆ ನೀಡಿದ್ದರು. ಅದಕ್ಕೆ ಅಭೂತಪೂರ್ವ ಬೆಂಬಲವೂ ಸಿಕ್ಕಿತ್ತು.


ಹೆಚ್ಚಿನ ಸೆಲೆಬ್ರಿಟಿಗಳೂ ಈ ಚಪ್ಪಾಳೆ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ತಮ್ಮ ಮನೆಯಲ್ಲಿ ಚಪ್ಪಾಳೆ ತಟ್ಟುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಕಿಚ್ಚ ಸುದೀಪ್ ಇದೊಂದು ಅದ್ಭುತ ಐಡಿಯಾ ಎಂದು ಹಾಡಿಹೊಗಳಿದ್ದಾರೆ.

‘ನಾವು ಕರ್ಪ್ಯೂನಲ್ಲಿರಲಿಲ್ಲ. ಭೂಮಿ ತಾಯಿಗೆ ಸ್ವಲ್ಪ ವಿಶ್ರಾಂತಿ ನೀಡಿದಂತೆ ಅನಿಸಿತು. ಈ ಕೆಲಸವನ್ನು ಆಗಾಗ ಮಾಡುತ್ತಿರಬೇಕು. ನಿಯಮಿತವಾಗಿ ಹೀಗೆ ಮಾಡುತ್ತಿರಬೇಕು. ಭೂಮಿ ತಾಯಿ ಇದ್ದರೆ ಮಾತ್ರ ನಮ್ಮ ಅಸ್ಥಿತ್ವ ಇರಲು ಸಾಧ‍್ಯ'’ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ