ನವರಸನಾಯಕ ಜಗ್ಗೇಶ್ ಅರ್ಧಕ್ಕೇ ಶಿಕ್ಷಣಕ್ಕೆ ಎಳ್ಳು ನೀರು ಬಿಡಲು ಕಾರಣವೇನು ಗೊತ್ತಾ?

ಭಾನುವಾರ, 22 ಮಾರ್ಚ್ 2020 (09:22 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಯಾರ ಸಹಾಯವೂ ಇಲ್ಲದೇ ಸ್ವಂತಿಕೆಯಿಂದ ಚಿತ್ರರಂಗದಲ್ಲಿ ಬೆಳೆದುಬಂದವರು. ಇಂತಿಪ್ಪ ಜಗ್ಗೇಶ್ ತಮ್ಮ ಹದಿಹರೆಯದ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಅರ್ಧಕ್ಕೇ ತಿಲಾಂಜಲಿ ಇತ್ತಿದ್ದು ಯಾಕೆ ಗೊತ್ತಾ?


ಜಗ್ಗೇಶ್ ಬಿಎಸ್ ಸಿ ಮೂರನೇ ವರ್ಷದಲ್ಲಿದ್ದಾಗ ಕನ್ನಡ ಪರೀಕ್ಷೆ ತಪ್ಪಿಸಿಕೊಂಡು ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿದರಂತೆ. ಅದಕ್ಕೆ ಕಾರಣ, ಆಗ ಅವರಿಗೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ದುಡಿಯುವ ಅವಕಾಶ ಸಿಕ್ಕಿತಂತೆ.

ಚಿತ್ರರಂಗದಲ್ಲಿ ಅವಕಾಶ ಪಡೆಯಬೇಕೆಂದು ಕಾಯುತ್ತಿದ್ದ ಜಗ್ಗೇಶ್ ಸಿಕ್ಕ ಅವಕಾಶ ಬಳಸಲು ವಿದ್ಯಾಭ್ಯಾಸವನ್ನೂ ಕೈಬಿಟ್ಟು ಮದರಾಸಿಗೆ ಹೋಗಿದ್ದರಂತೆ. ಮತ್ತೆ ಅವರು ಪರೀಕ್ಷೆ ಕಟ್ಟಿ ಪದವಿ ಮುಗಿಸುವ ಪ್ರಯತ್ನವನ್ನೂ ಮಾಡಲಿಲ್ಲವಂತೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಚಪ್ಪಾಳೆ ತಟ್ಟುವುದರಿಂದ ನಮಗೇನೂ ನಷ್ಟವಾಗಲ್ಲ ಎಂದ ಕಿಚ್ಚ ಸುದೀಪ್