ಅನಾರೋಗ್ಯ ಬಳಿಕ ಕಮ್ ಬ್ಯಾಕ್ ಮಾಡಿದ ಅರ್ಜುನ್ ಜನ್ಯಾ

ಶನಿವಾರ, 21 ಮಾರ್ಚ್ 2020 (09:39 IST)
ಬೆಂಗಳೂರು: ಇತ್ತೀಚೆಗಷ್ಟೇ ಹೃದಯಾಘಾತವಾದ ಕಾರಣ ಕೆಲವು ದಿನಗಳ ಕಾಲ ವೃತ್ತಿರಂಗದಿಂದ ದೂರವಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಈಗ ಮತ್ತೆ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.


ಚೇತರಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಜೀ ಕನ್ನಡ ವಾಹಿನಿಯ ‘ಸರಿಗಮಪ’ ರಿಯಾಲಿಟಿ ಶೋಗೆ ಮರಳಿದ್ದಾರೆ. ಇದಕ್ಕೂ ಮೊದಲು ಪ್ರೇಮ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಅರ್ಜುನ್ ಜನ್ಯಾ ಮತ್ತೆ ಕೆಲಸಕ್ಕೆ ಮರಳಿರುವ ವಿಚಾರವನ್ನು ಪ್ರಕಟಿಸಿದ್ದರು.

ಈ ವಾರ ಸರಿಗಮಪ ಶೋನಲ್ಲಿ ಅವರಿಗೆ ಮತ್ತೆ ಭರ್ಜರಿಯಾಗಿ ಸುಸ್ವಾಗತ ಕೋರಲಾಗಿದೆ. ಈ ನಡುವೆ ತಮಗೆ ಶುಭಹಾರೈಸಿದ ಎಲ್ಲಾ ಸ್ನೇಹಿತರಿಗೆ, ಅಭಿಮಾನಿಗಳಿಗೆ ಜನ್ಯಾ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊಟ್ಟ ಮಾತಿನಂತೆ ನಿರ್ಭಯಾ ಹ್ಯಾಂಗ್ ಮ್ಯಾನ್ ಗೆ ಜಗ್ಗೇಶ್ ನೆರವು: ಆದರೆ ಚೆಕ್ ನೋಡಿ ಅಭಿಮಾನಿಗಳ ಕೊಂಕು!