ಕೊಟ್ಟ ಮಾತಿನಂತೆ ನಿರ್ಭಯಾ ಹ್ಯಾಂಗ್ ಮ್ಯಾನ್ ಗೆ ಜಗ್ಗೇಶ್ ನೆರವು: ಆದರೆ ಚೆಕ್ ನೋಡಿ ಅಭಿಮಾನಿಗಳ ಕೊಂಕು!

ಶನಿವಾರ, 21 ಮಾರ್ಚ್ 2020 (09:30 IST)
ಬೆಂಗಳೂರು: ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಿದ ಹ್ಯಾಂಗ್ ಮ್ಯಾನ್ ಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಈ ಮೊದಲು ಘೋಷಿಸಿದ್ದಂತೆ ನಟ ಜಗ್ಗೇಶ್ 1 ಲಕ್ಷ ರೂ.ಗಳ ಚೆಕ್ ನೀಡಿದ್ದಾರೆ.


ಈ ಚೆಕ್ ನ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಆದರೆ ಈ ಚೆಕ್ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಯಾಕೆಂದರೆ ಈ ಚೆಕ್ ನಲ್ಲಿ 1 ಲಕ್ಷ ರೂ. ಎಂದು ಇದೆಯಷ್ಟೇ ಹೊರತು ಪವನ್ ಜಲ್ಲಾದ್ ಹೆಸರು ನಮೂದಿಸಿರಲಿಲ್ಲ. ಜತೆಗೆ ಖಾತೆ ಸಂಖ್ಯೆಯನ್ನೂ ಕಾಣದಂತೆ ಮರೆ ಮಾಡಲಾಗಿದೆ.

ಹೀಗಾಗಿ ಜಗ್ಗೇಶ್ ಟ್ವೀಟ್ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಚೆಕ್ ಮೇಲೆ ಪವನ್ ಹೆಸರು ಕೂಡಾ ಕಾಣಿಸ್ತಿಲ್ಲ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಗ್ಗೇಶ್ ‘ಜಗವೆಂಬ ಮಹಾನಗರದಲ್ಲಿ ಅನೇಕ ಗುಣ ಅಡಕವಾಗಿರುತ್ತದೆ. ಸಮಯೋಚಿತ ಜ್ಞಾನದ ಬಗ್ಗೆ ಹೇಳುವ ನನ್ನಿಂದ ಅದೆ ತಪ್ಪು ಆಗಬಾರದು ಎಂದು ಮುಂಜಾಗ್ರತೆ ಕ್ರಮವಷ್ಟೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಟಿ ಅಮಲಾ ಪೌಲ್ ಗುಟ್ಟು ಗುಟ್ಟು ಮದುವೆ