ಅಡುಗೆ ಮಾಡಿದ ಗಣೇಶ್ ಪುತ್ರಿ, ಕುಂಟಬಿಲ್ಲೆ ಆಡಿದ ಸೃಜನ್ ಪುತ್ರ: ಕರ್ಫ್ಯೂ ದಿನ ಸ್ಟಾರ್ ದಿನಚರಿ

ಸೋಮವಾರ, 23 ಮಾರ್ಚ್ 2020 (09:11 IST)
ಬೆಂಗಳೂರು: ಕೊರೋನಾವೈರಸ್ ಹರಡುವಿಕೆ ತಡೆಯಲು ಪ್ರಧಾನಿ ಮೋದಿ ಕರೆ ನೀಡಿದ್ದ ಒಂದು ದಿನದ ಜನತಾ ಕರ್ಫ್ಯೂಗೆ ಸೆಲೆಬ್ರಿಟಿಗಳೂ ಬೆಂಬಲ ನೀಡಿದ್ದರು.


ಅದರಂತೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಕರ್ಫ್ಯೂ ದಿನ ಮನೆಯಲ್ಲಿ ಕಳೆಯುವ ಫನ್ನಿ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಅದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯ ಅಪ್ಪ-ಅಮ್ಮನಿಗಾಗಿ ಅಡುಗೆ ಮಾಡಿದ್ದರೆ, ಸೃಜನ್ ಲೋಕೇಶ್ ಪುತ್ರ ಕುಂಟಬಿಲ್ಲೆ ಆಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇನ್ನು ಕೆಲವರು ಮನೆಯೊಳಗೇ ವರ್ಕೌಟ್ ಮಾಡುತ್ತಾ, ತಮ್ಮ ಮನೆಯ ಸದಸ್ಯರೊಂದಿಗೆ ಕಾಲ ಕಳೆಯುತ್ತಾ ಇರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿಕೊಂಡಿದ್ದು, ಜನತಾ ಕರ್ಫ್ಯೂವನ್ನು ಚಾಚೂ ತಪ್ಪದೇ ಪಾಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜನತಾ ಕರ್ಫ್ಯೂ ಬೆಂಬಲಿಸಲು ಗಾಯಕ ಸೋನು ನಿಗಂ ವಿಶಿಷ್ಟ ಕಾರ್ಯಕ್ರಮ