Select Your Language

Notifications

webdunia
webdunia
webdunia
webdunia

ಮನೆಯಲ್ಲೇ ವರ್ಕೌಟ್ ಮಾಡಿ ಬೋರ್ ಆಗಿದೆಯೇ? ಜಿಮ್ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ

ಮನೆಯಲ್ಲೇ ವರ್ಕೌಟ್ ಮಾಡಿ ಬೋರ್ ಆಗಿದೆಯೇ? ಜಿಮ್ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ
ಬೆಂಗಳೂರು , ಶುಕ್ರವಾರ, 15 ಮೇ 2020 (09:05 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಜಿಮ್ ಗೂ ತೆರಳಲು ಸಾಧ‍್ಯವಾಗುತ್ತಿಲ್ಲ ಎಂದು ಅದೆಷ್ಟೋ ಮಂದಿ ಮನೆಯಲ್ಲಿಯೇ ತಮ್ಮ ಕೈಲಾದ ರೀತಿಯಲ್ಲಿ ಜಿಮ್ ಮಾಡುತ್ತಿದ್ದಾರೆ. ಆದರೆ ಈಗ ಜಿಮ್ ಪ್ರಿಯರಿಗೆ ಸಿಹಿ ಸುದ್ದಿ ಕಾದಿದೆ.


ಮೇ 17 ರ ನಂತರ ಲಾಕ್ ಡೌನ್ ನಿಯಮಗಳನ್ನು ಮತ್ತಷ್ಟು ಸಡಿಲಿಸಲಿರುವ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಜಿಮ್ ತೆರೆಯಲು ಅವಕಾಶ ನೀಡುವ ಸಾಧ್ಯತೆಯಿದೆ.

ಆದರೆ ಜಿಮ್ ಗೆ ಮೊದಲಿನಂತೆ ಬೇಕಾಬಿಟ್ಟಿ ತೆರಳುವಂತಿಲ್ಲ. ಸೂಕ್ತ ಸುರಕ್ಷತಾ ಸಾಧನ, ಸಾಮಾಜಿಕ ಅಂತರ ಮುಂತಾದ ಷರತ್ತುಗಳನ್ನು ಪಾಲಿಸಬೇಕಾಗಬಹುದು. ಈ ಬಗ್ಗೆ ಸದ್ಯದಲ್ಲೇ ಸರ್ಕಾರ ಅಧಿಕೃತ ಘೋಷಣೆ ಮಾಡುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಬ್ಬಾ...! ಈ ಹಲಸಿನ ಕಾಯಿಯ ತೂಕವೆಷ್ಟು ಗೊತ್ತೇ?!