Publish Date: Tue, 28 Jul 2020 (11:03 IST)
Updated Date: Tue, 28 Jul 2020 (11:06 IST)
ನವದೆಹಲಿ: ಕೊರೋನಾ ಜೀವ ಭಯ ಹುಟ್ಟು ಹಾಕುವುದರ ಜತೆಗೆ ಹಲವರ ಜೀವನವನ್ನೂ ಕಿತ್ತುಕೊಂಡಿದೆ. ಹಲವರು ತುತ್ತು ಅನ್ನಕ್ಕಾಗಿ ಪರದಾಡುವಂತೆ ಮಾಡಿದೆ.
ವಿಶ್ವಸಂಸ್ಥೆಯ ಇತ್ತೀಚೆಗಿನ ಅಂಕಿ ಅಂಶದ ಪ್ರಕಾರ ಕೊರೋನಾದಿಂದಾಗಿ 128000 ಮಕ್ಕಳು ಸಾವನ್ನಪ್ಪಲಿದ್ದಾರಂತೆ. ಹಸಿವು, ಸರಿಯಾಗಿ ಔಷಧಗಳ ಪೂರೈಕೆಯಾಗದೇ ಮಕ್ಕಳ ಜೀವ ಅಪಾಯದಲ್ಲಿದೆ ಎಂದು ವಿಶ್ವಸಂಸ್ಥೆಯ ವರದಿ ಎಚ್ಚರಿಸಿದೆ.
ಕೊರೋನಾದಿಂದಾಗಿ ಹಲವರು ಉದ್ಯೋಗ ಕಳೆದುಕೊಂಡು ಅಗತ್ಯ ವಸ್ತುಗಳನ್ನು ಖರೀದಿಸಲು ದುಡ್ಡಿಲ್ಲದೇ ಪರದಾಡುತ್ತಿದ್ದಾರ. ತೀರಾ ಗ್ರಾಮೀಣ ಭಾಗದಲ್ಲಿರುವವರಿಗೆ ಅಗತ್ಯ ವಸ್ತಗಳ ಪೂರೈಕೆಯೇ ಆಗುತ್ತಿಲ್ಲ. ಇದರ ಪರಿಣಾಮ ಇನ್ನೂ ಹಲವು ವರ್ಷಗಳವರೆಗೆ ಮುಂದುವರಿಯಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
Krishnaveni K
Publish Date: Tue, 28 Jul 2020 (11:03 IST)
Updated Date: Tue, 28 Jul 2020 (11:06 IST)