Publish Date: Mon, 27 Jul 2020 (11:47 IST)
Updated Date: Mon, 27 Jul 2020 (11:49 IST)
ಮಂಗಳೂರು: ಮದುವೆಯ ವಧು-ವರ ಸೇರಿದಂತೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬರೋಬ್ಬರಿ 43 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕಾಸರಗೋಡಿನ ಬದಿಯಡ್ಕದಲ್ಲಿ ಜುಲೈ 17 ರಂದು ವಿವಾಹ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ನಿಯಮ ಮೀರಿ 128 ಮಂದಿ ಭಾಗಿಯಾಗಿದ್ದರು. ನಿಯಮದ ಪ್ರಕಾರ 50 ಮಂದಿ ಅತಿಥಿಗಳಿಗಷ್ಟೇ ಪಾಲ್ಗೊಳ್ಳುವ ಅವಕಾಶವಿದೆ.
ಈ ಹಿನ್ನಲೆಯಲ್ಲಿ ವಧುವಿನ ತಂದೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಷ್ಟೇ ಕಠಿಣ ನಿಯಮ ಮಾಡಿದರೂ ಜನರು ಪಾಲಿಸದೇ ಇದ್ದರೆ ಈ ರೀತಿಯ ಎಡವಟ್ಟುಗಳೇ ಆಗೋದು.