ಕಚೇರಿಗೆ ಹೋಗಲು ಶುರು ಮಾಡಿದ್ದೀರಾ? ಹಾಗಿದ್ದರೆ ತಪ್ಪದೇ ಸಂಜೆ ಈ ಕೆಲಸ ಮಾಡಿ!

ಗುರುವಾರ, 21 ಮೇ 2020 (09:27 IST)
ಬೆಂಗಳೂರು: ಕೊರೋನಾವೈರಸ್ ಗೆ ಹೆದರಿ ಮನೆಯಲ್ಲೇ ಕೂರುವ ಕಾಲ ಕಳೆದು ಈಗ ಕೊರೋನಾ ಜೊತೆಗೇ ಬದುಕಲು ಕಲಿಯುವ ಸಮಯ ಬಂದಿದೆ.


ಇನ್ನೇನು ಜನ ಜೀವನ ಸಹಜಸ್ಥಿತಿಗೆ ಬರುತ್ತಿದ್ದು, ಕಚೇರಿಗಳೂ ತೆರೆಯುತ್ತಿವೆ. ಆದರೆ ಕೊರೋನಾ ನಿಂತಿಲ್ಲ ಎನ್ನುವುದನ್ನು ಮರೆಯಬಾರದು. ಹಾಗಾಗಿ ಕಚೇರಿಗೆ ತೆರಳಿದರೆ ಮನೆಗೆ ಬಂದ ಮೇಲೆ ವೈಯಕ್ತಿಕ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ.

ಮನೆಗೆ ಬಂದ ತಕ್ಷಣವೇ ಎಂದಿನಂತೆ ಎಲ್ಲೆಂದರಲ್ಲಿ ಕೂರದೇ, ಡ್ರೆಸ್ ಹಾಕದೇ ನೇರವಾಗಿ ಬಚ್ಚಲು ಮನೆಗೆ ಹೋಗಿ. ಬಿಸಿ ನೀರಿನಲ್ಲಿ ಆಯಾ ದಿನ ಬಳಸಿದ ಡ್ರೆಸ್, ಬ್ಯಾಗ್, ಸಾಕ್ಸ್ ಎಲ್ಲವನ್ನೂ ಕೆಲವು ಕಾಲ ನೆನೆಸಿ ತೊಳೆಯಿರಿ. ಆ ಬಳಿಕ ಚೆನ್ನಾಗಿ ಬಿಸಿ ನೀರಿನ ಸ್ನಾನ ಮಾಡಿಕೊಂಡೇ ಮನೆಯೊಳಗೆ ಬಂದು ಯಾವುದೇ ವಸ್ತುಗಳನ್ನು ಮುಟ್ಟಿ. ಕಚೇರಿಯಲ್ಲಿರುವಾಗ, ದಾರಿಯಲ್ಲಿ ಯಾವ ವ್ಯಕ್ತಿಯಿಂದ ಹೇಗೆ ವೈರಸ್ ಅಂಟಿಕೊಳ್ಳುತ್ತದೆ ಎಂದು ಹೇಳಲಾಗದು. ಹೀಗಾಗಿ ನಾವು ಸ್ವಚ್ಛತೆ ಮಾಡಿದರೆ ಕುಟುಂಬದವರೂ ಸುರಕ್ಷಿತರಾಗಿರುತ್ತಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಸ್, ಆಟೋ ಹತ್ತಲು ಹಿಂಜರಿಯುತ್ತಿರುವ ಜನ