Publish Date: Wed, 20 May 2020 (19:50 IST)
Updated Date: Wed, 20 May 2020 (19:52 IST)
ಕೊರೊನಾ ವೈರಸ್ ತಡೆಗೆ ಜಾರಿಮಾಡಿದ್ದ ಲಾಕ್ ಡೌನ್ ನಾಲ್ಕನೇ ಹಂತದಲ್ಲಿ ಸಡಿಲಿಕೆ ಸಿಗುತ್ತಿದ್ದಂತೆ ಯುವತಿಯೊಬ್ಬಳನ್ನು ಅಪಹರಣ ಮಾಡಲಾಗಿದೆ.
ಕಲಬುರಗಿ ನಗರ ಹೊರವಲಯದ ನಂದೂರು ಕೆ ಗ್ರಾಮದ 17 ವರ್ಷದ ಯುವತಿಯನ್ನು ಕಿಡ್ನಾಪ್ ಮಾಡಲಾಗಿದೆ.
ಅಪಹರಣ ಕೃತ್ಯಕ್ಕೆ ಯುವಕನೊಬ್ಬನ ಕುಟುಂಬದವರು ಸಹಕಾರ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವತಿಯ ಪೋಷಕರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಸುರೇಶ್ ತಂದೆ ಲಕ್ಷ್ಮಣ ಎಂಬಾತ ಯುವತಿಯನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯುವತಿ ಪತ್ತೆಗೆ ಬಲೆ ಬೀಸಲಾಗಿದೆ.