Publish Date: Thu, 21 May 2020 (09:20 IST)
Updated Date: Thu, 21 May 2020 (09:21 IST)
ನವದೆಹಲಿ : ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಪ್ ಆ್ಯಪ್ ತನ್ನ ಸ್ಟೇಟಸ್ ಮಿತಿಯನ್ನು ಮತ್ತೆ 30 ಸೆಕೆಂಡ್ ಗೆ ಏರಿಕೆ ಮಾಡಿದೆ.
ಇಡೀ ವಿಶ್ವವೇ ಲಾಕ್ ಡೌನ್ ಹಿನ್ನಲೆಯಲ್ಲಿ ವಾಟ್ಸಪ್ ಬಳಸುವವರ ಸಂಖ್ಯೆ ಏರಿಕೆಯಾಗಿತ್ತು. ಇದರಿಂದ ಸರ್ವರ್ ಸಮಸ್ಯೆ ಎದುರಾಗುತ್ತಿದ್ದರಿಂದ ಅದನ್ನು ಕಡಿಮೆಮಾಡಲು ಸ್ಟೇಟಸ್ ಮಿತಿಯನ್ನು 30 ಸೆಕೆಂಡಿನಿಂದ 15 ಸೆಕೆಂಡ್ ಗೆ ಇಳಿಕೆ ಮಾಡಲಾಗಿತ್ತು.ಆದರೆ ಈಗ ಮತ್ತೆ ಸ್ಟೇಟಸ್ ಮಿತಿಯನ್ನು ಮತ್ತೆ 30 ಸೆಕೆಂಡ್ ಗೆ ಏರಿಕೆ ಮಾಡುವ ಮೂಲಕ ಬಳಕೆದಾರರಿಗೆ ಸಿಹಿಸುದ್ದಿ ನೀಡಿದೆ.
ಅಲ್ಲದೇ ಹೊಸ ಆಂಡ್ರಾಯ್ಡ್ ವಾಟ್ಸಪ್ 2.20.166 ಆವೃತ್ತಿ ಅಪ್ ಡೇಟ್ ನ್ನು ಬಿಡುಗಡೆ ಮಾಡಿದ್ದು, ಇದೀಗ ಇದು ಬಳಕೆದಾರರಿಗೆ ಲಭ್ಯವಾಗುತ್ತಿದೆ.