Webdunia - Bharat's app for daily news and videos

Install App

ಉದ್ಯಮಿಯ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ನಟಿ ಜೀನತ್ ಅಮನ್

Webdunia
ಶುಕ್ರವಾರ, 23 ಮಾರ್ಚ್ 2018 (19:00 IST)
ಬಾಲಿವುಡ್‌ನ ಖ್ಯಾತ ನಟಿಯಾಗಿದ್ದ 68 ವರ್ಷ ವಯಸ್ಸಿನ ಜೀನತ್ ಅಮನ್, ಮುಂಬೈ ಮೂಲದ 38 ವರ್ಷ ವಯಸ್ಸಿನ ಉದ್ಯಮಿಯ ವಿರುದ್ಧ ಅತ್ಯಾಚಾರವೆಸಗಿದ ದೂರು ದಾಖಲಿಸಿದ್ದಾರೆ.
68 ವರ್ಷ ವಯಸ್ಸಿನ ನಟಿ ಜುಹು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. "ಈ ವಿಷಯವನ್ನು ಅಪರಾಧ ಶಾಖೆಗೆ ಹಸ್ತಾಂತರಿಸಲಾಗಿದ್ದು, ತನಿಖೆ ನಡೆಯುತ್ತಿದೆ" ಎಂದು ಡಿಪ್ಯುಟಿ ಕಮೀಶನರ್ ಆಫ್ ಪೋಲಿಸ್ (ಕ್ರೈಮ್) ನಿಸಾರ್ ಟಾಂಬೋಲಿ ತಿಳಿಸಿದ್ದಾರೆ.
 
ಭಾರತೀಯ ದಂಡ ಸಂಹಿತೆಯ 376,420,406,465,467,468,469,471,506 ರ ಅಡಿಯಲ್ಲಿ ಪೊಲೀಸರು ಉದ್ಯಮಿ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ.
 
ವರದಿಗಳ ಪ್ರಕಾರ, ಜನವರಿ 30, 2018 ರಂದು ಉದ್ಯಮಿ ತಮ್ಮನ್ನು ಹಿಂಬಾಲಿಸುತ್ತಿದ್ದಾನೆ ಎಂದು ಆರೋಪಿಸಿ ಒಂದು ಕಾಲದ ಹಾಟ್ ನಟಿ ಜೀನತ್ ಅಮನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು.
 
ಆರೋಪಿ, 38 ವರ್ಷದ ಉದ್ಯಮಿ, ತನ್ನ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ವಿವಾಹದ ( 'ನಿಕಾ') ನಕಲಿ ದಾಖಲೆಗಳನ್ನು ತಯಾರಿಸಿ ತನ್ನ ಚಿನ್ನದ ಆಭರಣ ಮತ್ತು ನಾಲ್ಕು ಫ್ಲಾಟ್‌ಗಳನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ಬಾಲಿವುಡ್ ನಟಿ ಜೀನತ್ ಅಮನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಕ್ಷಿತ್ ಶೆಟ್ಟಿ ಎಲ್ಲಿ ಹೋಗಿದ್ದಾರೆ, ರಾಜ್ ಬಿ ಶೆಟ್ಟಿ ಕೊಟ್ರು ಅಪ್ ಡೇಟ್

ಕೂಲಿ ಸಿನಿಮಾ ಟಿಕೆಟ್ ದರ ಯದ್ವಾ ತದ್ವಾ ಏರಿಕೆ: ಕೇಳೋರೇ ಇಲ್ಲ

ನಟ ಧನುಷ್ ಜತೆ ಡೇಟಿಂಗ್ ವದಂತಿ, ಕೊನೆಗೂ ಮೌನ ಮುರಿದ ಮೃಣಾಲ್ ಠಾಕೂರ್‌

ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ಹಿರಿಯ ನಟಿ ಜಯಾ ಬಚ್ಚನ್ ಹೀಗೇ ನಡೆಸಿಕೊಳ್ಳುವುದಾ, ವಿಡಿಯೋ ವೈರಲ್

ಮುಂದಿನ ಸುದ್ದಿ
Show comments