Select Your Language

Notifications

webdunia
webdunia
webdunia
webdunia

ನಟಿ, ಮಾಜಿ ಸಂಸದೆ ರಮ್ಯಾ ಅವರ ಮದುವೆ ಬಗ್ಗೆ ಅವರ ತಾಯಿ ಹೇಳಿದ್ದಾದರೂ ಏನು ಗೊತ್ತಾ…?

ನಟಿ, ಮಾಜಿ ಸಂಸದೆ  ರಮ್ಯಾ ಅವರ ಮದುವೆ ಬಗ್ಗೆ ಅವರ ತಾಯಿ ಹೇಳಿದ್ದಾದರೂ ಏನು ಗೊತ್ತಾ…?
ಬೆಂಗಳೂರು , ಗುರುವಾರ, 22 ಮಾರ್ಚ್ 2018 (05:47 IST)
ಬೆಂಗಳೂರು : 2003ರಲ್ಲಿ ‘ಅಭಿ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಟ್ಟು ಅಂದು ತಮ್ಮ ನಟನೆಯ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸ್ಯಾಂಡಲ್ ವುಡ್ ನಟಿ ರಮ್ಯಾ ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ, ನಂತರ ಚಿತ್ರರಂಗ ಬಿಟ್ಟು ರಾಜಕೀಯದಲ್ಲಿ ತೊಡಗಿದ ಅವರು ಇಲ್ಲಿಯವರೆಗೆ ತಮ್ಮ ಮದುವೆಯ ಬಗ್ಗೆ ಯಾವ ಸುದ್ದಿಯನ್ನು ತಿಳಿಸಿರಲಿಲ್ಲ. ಆದರೆ ಇದೀಗ ರಮ್ಯಾ ಅವರ  ತಾಯಿ ರಂಜಿತಾ ಅವರು ತಮ್ಮ ಮಗಳ ಮದುವೆ ಬಗ್ಗೆ ತಿಳಿಸಿದ್ದಾರೆ.


ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿದ ರಂಜಿತಾ ಅವರು,’ ರಮ್ಯಾ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಹಲವು ಬಾರಿ ಜಗಳ ಆಗಿದೆ. ರಾಜಕೀಯದಲ್ಲಿ ಒಂಟಿಯಾಗಿ ಇರೋದು ಕಷ್ಟವಾಗುತ್ತದೆ. ಹಾಗಾಗಿ ಆದಷ್ಟು ಬೇಗ ಮದುವೆಯಾಗು ಅಂತಾ ಸಲಹೆಯನ್ನು ಸಹ ನೀಡಿದ್ದೇನೆ. ಆದ್ರೆ ರಮ್ಯಾ ರಾಜಕೀಯ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂಬ ಗುರಿಯನ್ನು ಹೊಂದಿದ್ದಾರೆ. ನನ್ನ ಜೀವನದಲ್ಲಿ ಮದುವೆ ಎರಡನೇ ಸ್ಥಾನದಲ್ಲಿ, ಮೊದಲ ಗುರಿ ಸಾಧನೆ. ಹೀಗಾಗಿ ಸಾಧಿಸಿದ ಬಳಿಕ ಆಗುತ್ತೇನೆ ಎಂದು  ಹೇಳಿರುವುದಾಗಿ’ ತಿಳಿಸಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೊರಾ ಫತೇಹಿ ಬೆಲ್ಲಿ ಡಾನ್ಸ್ ನೋಡಿದ್ರೆ ಜಗತ್ತನ್ನೇ ಮರೆಯತ್ತೀರಿ: ತಪ್ಪದೇ ವಿಡಿಯೋ ನೋಡಿ