Publish Date: Wed, 21 Mar 2018 (10:23 IST)
Updated Date: Wed, 21 Mar 2018 (10:25 IST)
ಚೆನ್ನೈ: ಜಯಲಲಿತಾ ಸಾವಿನ ನಿಗೂಢತೆಯನ್ನು ತನಿಖೆ ನಡೆಸಲು ನಿಯೋಜಿಸಿದ್ದ ತನಿಖಾಧಿಕಾರಿಗಳ ಮುಂದೆ ಶಶಿಕಲಾ ನಟರಾಜನ್ ಕೆಲವೊಂದು ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ.
ತಮ್ಮ ಪೊಯೆಸ್ ಗಾರ್ಡನ್ ನಿವಾಸದ ಶೌಚಾಲಯದಲ್ಲಿ ಜಯಲಲಿತಾ ಕುಸಿದು ಬಿದ್ದಿದ್ದರು. ತಕ್ಷಣ ಅವರು ನನ್ನ ಕೂಗಿದರು. ಅಲ್ಲಿಗೆ ಹೋದಾಗಲೂ ಆಸ್ಪತ್ರೆಗೆ ಹೋಗುವುದು ಬೇಡ ಎಂದೇ ಅವರು ಹೇಳಿದ್ದರು. ಆದರೆ ನಾನು ತಕ್ಷಣ ವೈದ್ಯರಿಗೆ ಕರೆ ಮಾಡಿ ಆಂಬ್ಯುಲೆನ್ಸ್ ತರಲು ಹೇಳಿದೆ.
ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಜಯಲಲಿತಾಗೆ ಒಮ್ಮೆ ಎಚ್ಚರವಾಗಿತ್ತು. ಅವರು ಎದ್ದು ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಆಸ್ಪತ್ರೆಯಲ್ಲಿದ್ದಷ್ಟು ದಿನಗಳಲ್ಲಿ ಮೂರು ಬಾರಿ ಅವರ ವಿಡಿಯೋ ಮಾಡಲಾಗಿತ್ತು. ಒ ಪನೀರ್ ಸೆಲ್ವಂ ಮತ್ತು ತಂಬಿದೊರೈಗೆ ಜಯಲಲಿತಾ ಭೇಟಿಗೆ ಅವಕಾಶ ಮಾಡಲಾಗಿತ್ತು ಎಂದು ಶಶಿಕಲಾ ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಪನೀರ್ ಸೆಲ್ವಂ ಮತ್ತು ತಂಬಿದೊರೈ ನಮಗೆ ಜಯಲಲಿತಾ ಭೇಟಿ ಮಾಡಲು ಅವಕಾಶ ನೀಡಲಾಗಿಲ್ಲ ಎಂದು ಆಪಾದಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ