Select Your Language

Notifications

webdunia
webdunia
webdunia
webdunia

ವಿ.ಕೆ.ಶಶಿಕಲಾ ಅವರ ಪತಿ ನಟರಾಜನ್ ವಿಧಿವಶ

ವಿ.ಕೆ.ಶಶಿಕಲಾ ಅವರ ಪತಿ ನಟರಾಜನ್ ವಿಧಿವಶ
ಚೆನ್ನೈ , ಮಂಗಳವಾರ, 20 ಮಾರ್ಚ್ 2018 (06:42 IST)
ಚೆನ್ನೈ : ಜಯಲಲಿತಾ ಅವರ ಆಪ್ತೆ, ಎಐಎಡಿಎಂಕೆ ನಾಯಕಿಯಾಗಿರುವ ವಿ.ಕೆ.ಶಶಿಕಲಾ ಅವರ  ಪತಿ ನಟರಾಜನ್ ಅವರು ಚೆನ್ನೈನ ಗ್ಲೋಬಲ್ ಆಸ್ಪತ್ರೆಯಲ್ಲಿ  ತಡರಾತ್ರಿ 1.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.


76 ವರ್ಷ ವಯಸ್ಸಿನ ನಟರಾಜನ್ ಅವರು ಬಹು ಅಂಗಾಂಗ ವೈಫಲ್ಯ, ಶ್ವಾಸಕೋಶ ಸೋಂಕುನಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಮಾ.16ರಂದು ಗ್ಲೆನೇಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಶಿಕಲಾ ಅವರ ಪತಿ ನಟರಾಜನ್ ಅವರು ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ 1.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಅವರ ಮೃತದೇಹವನ್ನು ಶ್ರೀರಾಮಚಂದ್ರ ಮೆಡಿಕಲ್ ಆಸ್ಪತ್ರೆಯಲ್ಲಿ ಸಂರಕ್ಷಿಸಿ ಇಡಲಾಗಿದೆ.


ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಶಶಿಕಲಾ ಅವರು ಪೆರೋಲ್ ಸಿಕ್ಕ ನಂತರ ಅಂತ್ಯಸಂಸ್ಕಾರದ ವಿಧಿವಿಧಾನ ನೇರವೆರಿಸಲಿದ್ದಾರೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂದು ಬಸವಣ್ಣ, ಇಂದು ಸಿದ್ದರಾಮಣ್ಣ: ಲಿಂಗಾಯುತ ಸಮುದಾಯ ಪರ ಐತಿಹಾಸಿಕ ರಣಕಹಳೆ ಮೊಳಗಿಸಿದ ಕಾಂಗ್ರೆಸ್ ಸರ್ಕಾರ