Webdunia - Bharat's app for daily news and videos

Install App

ಕಾಲ್ ಡ್ರಾಪ್ ರೆಕಾರ್ಡ್ ಕೇಸ್ ನ ಆರೋಪಿ ರಿಜ್ವಾನ್ ಅವರಿಂದ ತಮ್ಮ ವೈವಾಹಿಕ ಜೀವನ ಹಾಳಾಗಿದೆ ಎಂದು ನಟಿ ಆಕೃತಿ ನಾಗ್ಪಾಲ್ ಹೇಳಿದ್ದೇಕೆ…?

Webdunia
ಸೋಮವಾರ, 26 ಮಾರ್ಚ್ 2018 (06:02 IST)
ಮುಂಬೈ : ಕಾಲ್ ಡ್ರಾಪ್ ರೆಕಾರ್ಡ್ ಕೇಸ್ ನಲ್ಲಿ ಇತ್ತೀಚೆಗೆ ಬಾಲಿವುಡ್ ತಾರೆಯರ ಹೆಸರು ಕೇಳಿಬರುತ್ತಿದ್ದು, ಆದರೆ ಇದೀಗ ಈ ಕೇಸ್ ನ ಆರೋಪಿ ರಿಜ್ವಾನ್ ಅವರಿಂದ ತಮ್ಮ ವೈವಾಹಿಕ ಜೀವನ ಹಾಳಾಗಿದೆ ಎಂದು ಟಾಲಿವುಡ್ ನ ನಟಿಯೊಬ್ಬರು ಕೇಸು ನಮೂದಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.


ಟಾಲಿವುಡ್ ನ ಖ್ಯಾತ ನಟಿ ಆಕೃತಿ ನಾಗ್ಪಾಲ್  ಅವರು  2014ರಲ್ಲಿ ಅನಿಲ್ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ನಂತರ ಅವರಿಬ್ಬರ ನಡುವೆ ಕೆಲವು ವಿಷಯಗಳಿಗೆ ಮನಸ್ಥಾಪ ಉಂಟಾಗಿ ಅವರಿಬ್ಬರಿಗೆ ವಿಚ್ಛೇಧನವಾಗಿತ್ತು. ‘ರಿಜ್ವಾನ್ ರವರು ನನ್ನ ಪರ್ಸನಲ್ ಕಾಲ್ ಡೇಟಾವನ್ನು ಕದ್ದು ಅನಿಲ್ ಅವರಿಗೆ ಕೊಡುವುದರ ಮೂಲಕ ನನ್ನ ಬಗ್ಗೆ ಇಲ್ಲ ಸಲ್ಲದ ಸುಳ್ಳು ಸುದ್ದಿ ಎಬ್ಬಿಸುವುದರ ಮೂಲಕ ನಮ್ಮಿಬ್ಬರ ಮನಸ್ಥಾಪಗಳಿಗೆ ಹಾಗು ನಮ್ಮಿಬ್ಬರ ಒಡಕಿಗೆ  ಕಾರಣರಾಗಿದ್ದಾರೆ’ ಎಂದು ಆಕೃತಿ ಆರೋಪಿಸಿದ್ದಾರೆ. ‘ಅನಿಲ್ ಈಗ ಮತ್ತೊಂದು ಯುವತಿಯೊಂದಿಗೆ ವಿವಾಹೇತರ ಸಂಭಂದ ಇಟ್ಟುಕೊಂಡಿದ್ದಾರೆಂದು ಹಾಗು ಇದಕ್ಕೆ ರಿಜ್ವಾನ್ ರವರೇ ಪ್ರೋತ್ಸಾಹಿಸುತ್ತಿದ್ದಾರೆಂದು’ ಆಕೃತಿ ಅವರು ಆರೋಪಿಸಿ ರಿಜ್ವಾನ್ ಅವರ ಮೇಲೆ ಕಾನೂನಿನ ಪ್ರಕಾರ ಕೇಸು ನಮೂದಿಸಿದ್ದಾರೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments