Select Your Language

Notifications

webdunia
webdunia
webdunia
webdunia

ಖ್ಯಾತ ಗಾಯಕ ಹಿಮೇಶ್ ರಶ್ಮಿಯ-ಕೋಮಲ್ ವಿಚ್ಛೇಧನ

Himesh Reshammiya
ಮುಂಬೈ , ಗುರುವಾರ, 8 ಜೂನ್ 2017 (12:34 IST)
ಮುಂಬೈ: ಬಾಲಿವುಡ್ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಹಿಮೇಶ್ ರಶ್ಮಿಯ ಹಾಗೂ ಪತ್ನಿ ಕೋಮಲ್ ರವರ  22 ವರ್ಷಗಳ ಸುದೀರ್ಘ ವೈವಾಹಿಕ ಜೀವನ ವಿಚ್ಛೇದನದಲ್ಲಿ ಅಂತ್ಯವಾಗಿದೆ.
 
ಹಿಮೇಶ್ ರಶ್ಮಿಯ ಪತ್ನಿ ಕೋಮಲ ಅವರು ವೈವಾಹಿಕ ಜೀವನಕ್ಕೆ ವಿಚ್ಛೇದನ ಕೋರಿ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಬಾಂದ್ರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯ ಹಿಮೇಶ್ ರಶ್ಮಿಯರವರು ತಮ್ಮ ವೈವಾಹಿಕ ಜೀವನದಿಂದ ಬೇರ್ಪಡಬಹುದು ಎಂದು ಆದೇಶ ನೀಡಿದೆ. 
 
ಹಿಮೇಶ್ ಹಾಗೂ ಕೋಮಲ್ ದಂಪತಿಗಳಿಗೆ ಸ್ವಯಂ ಎಂಬ ಪುತ್ರನಿದ್ದಾನೆ. ಇನ್ನು ಕಳೆದ 10 ವರ್ಷಗಳಿಂದ ಹಿಮೇಶ್ ಟಿವಿ ನಟಿ ಸೋನಿಯಾ ಕಪೂರ್ ಜತೆ ವಾಸವಾಗಿದ್ದರು. ಜೀವನದಲ್ಲಿ ಪರಸ್ಪರ ಗೌರವ ಅತ್ಯಂತ ಮುಖ್ಯವಾದದ್ದು. ನಮ್ಮ ಸಂಬಂಧಕ್ಕೆ ಗೌರವ ನೀಡಿ ಕೋಮಲ್ ಹಾಗೂ ನಾನು ವಿಚ್ಛೇದನ ಪಡೆದು ದೂರಾಗುತ್ತಿದ್ದೇವೆ ಎಂದು ಹಿಮೇಶ್ ತಿಳಿಸಿದ್ದಾರೆ. ಅಲ್ಲದೇ ನನ್ನ ಮಗ ಸ್ವಯಂ ಹಾಗೂ ನನ್ನ ಕುಟುಂಬ ಸೋನಿಯಾ ಅವರನ್ನು ಇಷ್ಟಪಡುತ್ತದೆ ಕೋಮಲ್ ಹೇಳಿದರೆ, ಹಿಮೇಶ್ ಕುಟುಂಬ ನನಗೂ ಕುಟುಂಬವೇ ನಾನು ಅವರನ್ನು ಇಷ್ಟಪಡುತ್ತೇನೆ ಎಂದು ಸೋನಿಯಾ ಕಪುರ್ ತಿಳಿಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 
 

Share this Story:

Follow Webdunia kannada

ಮುಂದಿನ ಸುದ್ದಿ

ಕಾನ್ಸ್`ಟೇಬಲ್ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ