Webdunia - Bharat's app for daily news and videos

Install App

ನಟಿ ಸಿಮ್ರಾನ್ ಸೂರಿ ದೇಹ ನೋಡಲು ಅವರ ಟಾಪ್ ಕೆಳಗೆ ಎಳೆದ ಆ ನಿರ್ದೇಶಕ ಯಾರು ಗೊತ್ತಾ?

Webdunia
ಬುಧವಾರ, 17 ಅಕ್ಟೋಬರ್ 2018 (11:18 IST)
ಮುಂಬೈ : ಈಗಾಗಲೇ ಮೂವರಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತ ಹಿಂದಿ ಸಿನಿಮಾ ನಿರ್ದೇಶಕ ಸಾಜಿದ್ ಖಾನ್ ಮೇಲೆ ಇದೀಗ ಮತ್ತೊಂದು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.


ಹೌದು. ಈ ಹಿಂದೆ ನಿರ್ದೇಶಕ ಸಾಜಿದ್ ಖಾನ್ ಮೇಲೆ ಸಲೊನಿ ಚೋಪ್ರಾ, ರಾಚೆಲ್ ವೈಟ್ ಮತ್ತು ಪತ್ರಕರ್ತೆ ಕರಿಷ್ಮಾ ಉಪಾಧ್ಯಾಯ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ ಇದೀಗ ಮತ್ತೊಬ್ಬ ನಟಿ ಸಿಮ್ರಾನ್ ಸೂರಿ ನಿರ್ದೇಶಕ ಸಾಜಿದ್ ಖಾನ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.


2012ರಲ್ಲಿ “ಹಿಮ್ಮತ್‍ವಾಲಾ” ಸಿನಿಮಾ ಸಂದರ್ಭದಲ್ಲಿ ನನಗೆ ಆಡಿಷನ್‍ಗೆ ಬರುವಂತೆ ಅವರು ಕರೆ ಮಾಡಿದ್ದರು. ಅದರಂತೆ ನಾನು ಅವರ ಮನೆಗೆ ಹೋಗಿದ್ದಾಗ ಅವರು ತೆರೆದ ಮೈಯಲ್ಲಿ ಟ್ರೆಡ್‍ಮಿಲ್‍ನಲ್ಲಿದ್ದರು. ಅವರ ದೇಹವನ್ನೇ ಹೊಗಳಿಕೊಂಡ ಅವರು ಮುಜುಗರವಾಗುವಂತೆ ಮಾತನಾಡಿದ್ದರು. ಅಲ್ಲದೇ, ನನ್ನ ದೇಹವನ್ನು ತೋರಿಸುವಂತೆ ಹೇಳಿದ್ದ ಸಾಜಿದ್, ನನ್ನ ಟಾಪ್ ಕೆಳಗೆ ಎಳೆದಿದ್ದರು. ಆಗ ನಾನು ಕಿರುಚಿ, ಅವರಿಗೆ ಬೈದು ಅಲ್ಲಿಂದ ಬಂದುಬಿಟ್ಟೆ ಎಂದು ಸಿಮ್ರಾನ್ ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ.


ಹಾಗೆ ಸಾಜಿದ್‍ರಿಂದ ಸಿಮ್ರಾನ್ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು 6 ವರ್ಷಗಳ ಹಿಂದಾದರೂ ಅವರಿಗೆ ಆ ಬಗ್ಗೆ ಹೇಳಿಕೊಳ್ಳಲು ಧೈರ್ಯ ಸಾಲಲಿಲ್ಲವಂತೆ. ಆದರೆ ಈಗಾಗಲೇ ಮೂವರು ಆರೋಪ ಹೊರಿಸಿದ ಮೇಲೆ ಅವರಿಗೆ ತಮ್ಮ ನೋವನ್ನು ಬಹಿರಂಗಪಡಿಸಲು ಧೈರ್ಯ ಬಂದಿದೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಬಿಕಿನಿ ತೊಟ್ಟು ಪಡ್ಡೆ ಹೈಕಳ ಹಾರ್ಟ್‌ ಬೀಟ್ ಹೆಚ್ಚಿಸಿದ ಸೋನು ಗೌಡ

ಮತ್ತೇ ಒಂದಾಗುವ ನಿರ್ಧಾರ ಕೈಗೊಂಡ ಬಾಲಿವುಡ್‌ನ ಸ್ಟಾರ್ ಜೋಡಿ, ವಕೀಲರು ಹೇಳಿದ್ದೇನು

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

ಮುಂದಿನ ಸುದ್ದಿ