Webdunia - Bharat's app for daily news and videos

Install App

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರು ಜೊತೆ ಸೇರಿ ಕೇಕ್ ಮಾಡಿದ್ಯಾಕೆ ಗೊತ್ತಾ?

Webdunia
ಮಂಗಳವಾರ, 16 ಅಕ್ಟೋಬರ್ 2018 (07:13 IST)
ಬೆಂಗಳೂರು : ಬಿಗ್ ಬಾಸ್ ಸೀಸನ್ 5 ರಲ್ಲಿ ಪರಿಚಯವಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರು ಉತ್ತಮ  ಸ್ನೇಹಿತರಾಗಿದ್ದು, ಇತ್ತೀಚೆಗೆ  ತಮ್ಮ ಸ್ನೇಹದ ಸಂಭ್ರಮಾಚರಣೆ ಮಾಡಿದ್ದಾರೆ.


ಹೌದು ಅವರಿಬ್ಬರ ಸ್ನೇಹಕ್ಕೆ ಅಕ್ಟೋಬರ್ 14 ರಂದು ಒಂದು ವರ್ಷ ತುಂಬಿದೆ. ಆದಕಾರಣ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಈ ಖುಷಿ ವಿಚಾರವನ್ನು  ಕೇಕ್ ಕಟ್ ಮಾಡುವುದರ ಮೂಲಕ ಸೆಲೆಬ್ರೆಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೊಗಳನ್ನು ಇಬ್ಬರು ಕೂಡ ಇನ್‍ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ.


ಹಾಗೇ ನಿವೇದಿತಾ ಗೌಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ,”ಇಂದಿಗೆ ನಾನು ನಿಮ್ಮನ್ನು ಬಿಗ್‍ಬಾಸ್‍ನಲ್ಲಿ ಭೇಟಿಯಾಗಿ ಒಂದು ವರ್ಷ ಕಳೆಯಿತು. ದಿನದಿಂದ ದಿನಕ್ಕೆ ನಮ್ಮ ಸ್ನೇಹದ ಬಂಧ ಹೆಚ್ಚುತ್ತಾ ಹೋಗುತ್ತಿದೆ. ನಮ್ಮ ಬಗ್ಗೆ ಇಡೀ ಜಗತ್ತು ಏನೇ ಹೇಳಿದರೂ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲರಿಗಿಂತ ನನಗೆ ಚೆನ್ನಾಗಿ ಗೊತ್ತು ನೀನು ಏನು ಅಂತ. ಅಲ್ಲದೇ ನಾನು ಏನು ಎಂಬುದಾಗಿ ನಿನಗೂ ಚೆನ್ನಾಗಿ ಗೊತ್ತು. ನಮ್ಮ ಸ್ನೇಹಕ್ಕೆ ಇದುವೆ ಮುಖ್ಯ” ಎಂದು ಬರೆದುಕೊಂಡಿದ್ದಾರೆ.


ಅಲ್ಲದೇ ಚಂದನ್ ಕೂಡ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ,”ನಿಜವಾದ ಸ್ನೇಹಿತರು ಎಂದಿಗೂ ದೂರವಾಗುವುದಿಲ್ಲ. ನೀನು ಎಷ್ಟೇ ದೂರದಲ್ಲಿದ್ದರೂ ನನ್ನ ಹೃದಯದಲ್ಲಿ ಸದಾ ಇರುತ್ತೀಯಾ. ನನ್ನ ಜೀವನದಲ್ಲೇ ನೀನು ನನ್ನ ಅತ್ಯುತ್ತಮ ಸ್ನೇಹಿತೆ ಎಂದು ಹೇಳಲು ನನಗೆ ತುಂಬಾ ಸಂತೋಷವಾಗುತ್ತದೆ. ಇಂದಿಗೆ ನಮ್ಮ ಸ್ನೇಹ ಒಂದು ವರ್ಷದ ಸಂಭ್ರಮ ಆಚರಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments