ಬೆಂಗಳೂರು : ಕಿರಿಕ್ ಮಾಡಿಕೊಂಡೆ ಸುದ್ದಿಯಾಗುತ್ತಿರುವ ಸ್ಯಾಂಡಲ್ ವುಡ್ ನ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಇದೀಗ ಬಾಲಿವುಡ್ ನ ಶೋವೊಂದರಲ್ಲಿ ಕೂಡ ಕಿರಿಕ್ ಮಾಡಿದ್ದಾರಂತೆ.
									
			
			 
 			
 
 			
					
			        							
								
																	
ನಟಿ ಸಂಯುಕ್ತ ಹೆಗ್ಡೆ ಈ ಹಿಂದೆ ಕನ್ನಡದ ಬಿಗ್ ಬಾಸ್ ಸೀಸನ್ 5 ರ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಎಲ್ಲದಕ್ಕೂ ಕಿರಿಕಿರಿ ಮಾಡುತ್ತಿದ್ದು ನಟಿ ಒಂದು ದಿನ  ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡುವುದರ ಮೂಲಕ ಕಿರಿಕ್ ಮಾಡಿಕೊಂಡಿದ್ದಾರೆ.
ಹಾಗೇ  ಇದೀಗ ಬಾಲಿವುಡ್ ನಟಿ ಸನ್ನಿಲಿಯೋನ್ ಮತ್ತು ರಣ್‍ವಿಜಯ್ ಸಿಂಗಾ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಎಂಟಿವಿಯ `ಸ್ಪ್ಲಿಟ್ಸ್ ವಿಲ್ಲಾ’ ಡೇಟಿಂಗ್ ರಿಯಾಲಿಟಿ ಶೋನಲ್ಲಿ ಸಂಯುಕ್ತ ಬಿಳಿ ಮತ್ತು ಕಪ್ಪು ಬಣ್ಣದ ಬಿಕಿನಿ ತೊಟ್ಟು ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.
									
										
								
																	
ಈ ಕಾರ್ಯಕ್ರಮದಲ್ಲಿ ಸಿಂಬಾ ಹಾಗೂ ಮೈರಾ ನಡುವೆ ಲ್ವವಿಡವಿ ನಡೆಯುತ್ತಿತ್ತು. ಇದೀಗ ಸಂಯುಕ್ತ ಅವರ ಎಂಟ್ರಿಯಿಂದ ಸಿಂಬಾ ಕಣ್ಣು ಸಂಯುಕ್ತ ಕಡೆಗೆ ಬಿದ್ದಿದೆ. ಇದರಿಂದಾಗಿ ಮೈರಾ ಸಿಟ್ಟು ಮಾಡಿಕೊಂಡಿದ್ದಾರೆ. ಹಾಗೇ ಒಂದೇ ದಿನಕ್ಕೆ ಇತರ ಸ್ಪರ್ಧಿಗಳು ಅವರನ್ನು ಶೋದಿಂದ ಹೊರ ಕಳುಹಿಸಲು ಪ್ಲಾನ್ ಮಾಡುತ್ತಿದ್ದಾರಂತೆ.
									
											
							                     
							
							
			        							
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.