Select Your Language

Notifications

webdunia
webdunia
webdunia
webdunia

ನಟ, ನಿರ್ದೇಶಕರ ಲೈಂಗಿಕ ಕಿರುಕುಳ ಅನುಭವಿಸಲಾರದೆ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ನಟಿ ಸಂಗೀತಾ ಭಟ್

ನಟ, ನಿರ್ದೇಶಕರ ಲೈಂಗಿಕ ಕಿರುಕುಳ ಅನುಭವಿಸಲಾರದೆ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ನಟಿ ಸಂಗೀತಾ ಭಟ್
ಬೆಂಗಳೂರು , ಮಂಗಳವಾರ, 16 ಅಕ್ಟೋಬರ್ 2018 (07:03 IST)
ಬೆಂಗಳೂರು : ಮೀಟೂ ಅಭಿಯಾನದ ಮೂಲಕ ಮಹಿಳೆಯರು ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದು, ಇದೀಗ ನಟಿ ಸಂಗೀತಾ ಭಟ್ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ.


ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಸಂಗೀತಾ ಅವರಿಗೆ ಅಲ್ಲಿ ಅವರ ಪ್ರತಿಭೆಗೆ ಯಾವ ಬೆಲೆಯೂ ಸಿಗಲಿಲ್ಲವಂತೆ. ಅದು ಅಲ್ಲದೇ, ನಟ, ನಿರ್ದೇಶಕರಿಂದಲೂ ಅವರು ಲೈಂಗಿಕ ಕಿರುಕುಳವನ್ನು ಅನುಭವಿಸಿದ್ದರಂತೆ. ಈ ಕಾರಣದಿಂದ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಿದ್ದೇನೆ ಎಂದು ಅವರು ಮೀ ಟೂ ಅಭಿಯಾನದಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಆದರೆ ತನಗೆ ಕಿರುಕುಳ ಕೊಟ್ಟವರ ಹೆಸರನ್ನು ಮಾತ್ರ ಬಹಿರಂಗಪಡಿಸಿಲ್ಲ.


ಅಲ್ಲದೇ ಅವರು ಸಿನಿಮಾದಲ್ಲಿ ನಟಿಸುವ ಸಲುವಾಗಿ ತಾವು ಮದುವೆಯಾದ ವಿಚಾರವನ್ನು ಮುಚ್ಚಿಟ್ಟಿದ್ದರಂತೆ. ಆದರೆ ಇನ್ನು ಮುಂದೆ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಿರುವ ಕಾರಣ  ಮುಚ್ಚಿಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಧ್ರುವ ಸರ್ಜಾ ವಿರುದ್ಧ ಎಫ್ ಐಆರ್ ದಾಖಲು