ಚೆನ್ನೈ: ತಮಿಳು ಹಾಗೂ ತೆಲುಗಿನ ಪ್ರಖ್ಯಾತ ನಟಿ ಶ್ರೇಯಾ ಶರಣ್ ಅವರು ರಷ್ಯನ್ ಬಾಯ್ ಫ್ರೆಂಡ್ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಎಲ್ಲಾ ಕಡೆ ಹರಿದಾಡಿದ್ದು, ಈಗ ಈ ಸುದ್ದಿಗೆ ನಟಿ ಶ್ರೇಯಾ ಶರಣ್ ಅವರು ಬ್ರೇಕ್ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನಟಿ ಶ್ರೇಯಾ ಶರಣ್ ಅವರು, 'ನನಗೆ ಮದುವೆಯಾಗುತ್ತಿದೆ ಎಂಬ ಸುದ್ದಿ ಸುಳ್ಳು' ಎಂದಿದ್ದಾರೆ. ಈ ಬಗ್ಗೆ ಅವರ ತಾಯಿ ನೀರಜಾ ಅವರು ಮಾತನಾಡುತ್ತಾ, 'ಇದೆಲ್ಲಾ ವದಂತಿ ಅಷ್ಟೆ. ರಾಜಸ್ಥಾನದಲ್ಲಿನ ತನ್ನ ಗೆಳತಿಯ ಮದುವೆಯಲ್ಲಿ ಭಾಗಿಯಾಗುತ್ತಿದ್ದಾರೆ. ಹಾಗಾಗಿ ಬಟ್ಟೆ ಮತ್ತು ಒಡವೆಗಳಿಗೆ ಆರ್ಡರ್ ನೀಡಲಾಗಿತ್ತು. ಅದನ್ನೇ ತಪ್ಪಾಗಿ ಅರ್ಥೈಸಿದ್ದಾರೆ' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ