Select Your Language

Notifications

webdunia
webdunia
webdunia
webdunia

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ನಟಿ ಸೋನಾಲಿ ರೌತ್ ಗೆ ಜನರು ಟ್ರೋಲ್ ಮಾಡಿದ್ಯಾಕೆ?

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ನಟಿ ಸೋನಾಲಿ ರೌತ್ ಗೆ ಜನರು ಟ್ರೋಲ್ ಮಾಡಿದ್ಯಾಕೆ?
ಮುಂಬೈ , ಬುಧವಾರ, 13 ಜೂನ್ 2018 (12:42 IST)
ಮುಂಬೈ : ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಸೋನಾಲಿ ರೌತ್ ಅವರು ಇಫ್ತಾರ್ ಕೂಟಕ್ಕೆ ಹಾಟ್ ಡ್ರೆಸ್ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಪ್ರತಿ ವರ್ಷದಂತೆ ಈ ವರ್ಷವು ಕೂಡ  ಕಾಂಗ್ರೆಸ್ ಮುಖಂಡ ಸಿದ್ಧಿಖಿ ಅವರು ಅದ್ದೂರಿಯಾಗಿ ಇಫ್ತಾರ್ ಔತಣಕೂಟ ಏರ್ಪಡಿಸಿದ್ದು, ಈ ಕಾರ್ಯಕ್ರಮಕ್ಕೆ ಅನೇಕ ಬಾಲಿವುಡ್ ನ ಸ್ಟಾರ್ ನಟ-ನಟಿಯರು ಹಾಗೂ  ರಾಜಕೀಯ ಗಣ್ಯರು ಅಗಮಿಸಿದ್ದರು. ಅಲ್ಲಿಗೆ ಬಂದವರೆಲ್ಲರೂ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದರು. ಆದರೆ ನಟಿ ಸೋನಾಲಿ ರೌತ್ ಅವರು ಧರಿಸಿದ ಡ್ರೆಸ್ ಮಾತ್ರ ಸಿಕ್ಕಾಪಟ್ಟೆ ಬೋಲ್ಡ್ ಆಗಿತ್ತು. ಇದಕ್ಕೆ ಸಂಬಂಧಿಸಿದ ಫೋಟೋವನ್ನು ಅವರು ತಮ್ಮ ಇನ್‍ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.


ಇದನ್ನು ಕಂಡು ಕೆಲವರು “ಇಸ್ಲಾಂಗೆ, ಉಪವಾಸಕ್ಕೆ ನೀವು ಗೌರವ ಕೊಡದಿರಬಹುದು. ಆದರೆ ಪವಿತ್ರ ರಂಜಾನ್ ಮಾಸಕ್ಕಾದರೂ ಸ್ವಲ್ಪ ಗೌರವ ಕೊಡುವುದನ್ನು ಕಲಿಯಿರಿ. ಬೇರೆ ಧರ್ಮದಲ್ಲಿ ಈ ರೀತಿ ಡ್ರೆಸ್‌ನಲ್ಲಿ ಹೋದರೆ ಯಾರು ನಿಮ್ಮನ್ನು ಒಪ್ಪಲ್ಲ, ಎಚ್ಚರ" ಎಂದು ಕಾಮೆಂಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಖಾನ್ ಮೇಲೆ ಅಭಿಮಾನಿಗಳು ಕೋಪಗೊಂಡಿದ್ಯಾಕೆ?