Select Your Language

Notifications

webdunia
webdunia
webdunia
webdunia

ಜಾಕ್ವೆಲಿನ್ ಫರ್ನಾಂಡಿಸ್ ಫೋನ್ ಕಾಲ್ ಹಾಗೂ ಮೆಸೇಜ್ ಗೆ ಮಾಧುರಿ ದಿಕ್ಷೀತ್ ಪ್ರತಿಕ್ರಿಯೆ ನೀಡದೇ ಇರುವುದಕ್ಕೆ ಕಾರಣ ಏನು?

ಜಾಕ್ವೆಲಿನ್ ಫರ್ನಾಂಡಿಸ್  ಫೋನ್ ಕಾಲ್ ಹಾಗೂ ಮೆಸೇಜ್ ಗೆ ಮಾಧುರಿ ದಿಕ್ಷೀತ್ ಪ್ರತಿಕ್ರಿಯೆ ನೀಡದೇ ಇರುವುದಕ್ಕೆ ಕಾರಣ ಏನು?
ಮುಂಬೈ , ಶನಿವಾರ, 24 ಮಾರ್ಚ್ 2018 (06:04 IST)
ಮುಂಬೈ : ಬಾಲಿವುಡ್ ನ 'ಬಾಘಿ-2' ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅಭಿನಯದ 'ತೇಜಾಬ್' ಸಿನಿಮಾದ 'ಏಕ್ ದೋ ತೀನ್' ಹಾಡನ್ನು ರೀ ಕ್ರಿಯೇಟ್ ಮಾಡಲಾಗಿದ್ದು, ಇದಕ್ಕೆ ಮಾಧುರಿ ಅಭಿಮಾನಿಗಳು ವಿರೋಧವನ್ನು  ವ್ಯಕ್ತಪಡಿಸಿದ್ದರು. ಆದರೆ ಇದೀಗ ಮಾಧುರಿ ದೀಕ್ಷಿತ್ ಅವರು ಕೂಡ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


ಈ ಹಾಡಿನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಮಾಧುರಿ ಅವರು ಧರಿಸಿದ್ದ ಕಾಸ್ಟ್ಯೂಮ್ ಧರಿಸಿ ಡ್ಯಾನ್ಸ್ ಮಾಡಿದ್ದರು. ಆದರೆ ಇದನ್ನು ನೋಡಿದ ಮಾಧುರಿ ಅಭಿಮಾನಿಗಳು ಈ ಹಾಡಿನಲ್ಲಿ ಅಶ್ಲೀಲತೆಯನ್ನು ಪ್ರದರ್ಶಿಸಲಾಗಿದ್ದು,ಇದು  ಮಾಧುರಿ ದೀಕ್ಷಿತ್ ಅವರಿಗೆ ಮಾಡಿರುವ ಅಪಮಾನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು.


ಆದರೆ ಈ ಹಾಡಿನ ಟ್ರೈಲರ್ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಜಾಕ್ವೇಲಿನ್ ಅವರು ಮಾಧುರಿ ದೀಕ್ಷಿತ್ ಅವರಿಗೆ ಕಾಲ್ ಮಾಡಿದ್ದಾರೆ. ಆದರೆ ಮಾಧುರಿ ಅವರು ಮಾತ್ರ ಕಾಲ್ ರಿಸೀವ್ ಮಾಡಲಿಲ್ಲವಂತೆ. ನಂತರ ಜಾಕ್ವೇಲಿನ್ ಅವರು ಏಕ್ ದೋ ತೀನ್ ಚಾರ್’ ಹಾಡಿನ ಮೂಲಕ ನಾನು ನಿಮಗೆ ಗೌರವ ಸಲ್ಲಿಸುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದರಂತೆ. ಆದರೆ ಅದಕ್ಕೂ ಮಾಧುರಿ ಅವರು ಪ್ರತಿಕ್ರಿಯಿಸಿರಲಿಲ್ಲವಂತೆ. ಆದ್ದರಿಂದ ಮಾಧುರಿ ಅವರಿಗೆ ಇದರಿಂದ ಬೇಸರವಾಗಿದೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗು ಅಭಿಮಾನಿಗೆ ಕಿಚ್ಚ ಸುದೀಪ್ ಕೊಟ್ಟ ಭರವಸೆ ಏನು?