ಟೈಗರ್ ಶ್ರಾಫ್ ಬಗ್ಗೆ ದಿಶಾ ಪಠಾನಿ ಹೇಳಿದ್ದೇನು…?

Webdunia
ಶುಕ್ರವಾರ, 30 ಮಾರ್ಚ್ 2018 (10:30 IST)
ಮುಂಬೈ : ಬಾಲಿವುಡ್ ನಟ-ನಟಿಯರು ಡೇಟಿಂಗ್ ವಿಚಾರ ಕುರಿತಾಗಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಅದೇರೀತಿ ಈ ಹಿಂದೆ ನಟ ಟೈಗರ್ ಶ್ರಾಫ್ ಹಾಗೂ ನಟಿ ದಿಶಾ ಪಠಾನಿ ಅವರ ಡೇಟಿಂಗ್ ಬಗ್ಗೆ ರೂಮರ್ಸ್ ಗಳು ಕೂಡ ಕೇಳಿಬಂದಿದ್ದವು. ಇದೀಗ ನಟಿ ದಿಶಾ ಪಠಾನಿ ಅವರು ನಟ ಟೈಗರ್ ಶ್ರಾಫ್ ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸುವುದರ ಮೂಲಕ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.


ಟೈಗರ್ ಶ್ರಾಫ್ ಹಾಗೂ ದಿಶಾ ಪಠಾನಿ ಅವರು ನಟಿಸಿದ 'ಬಾಘಿ 2' ಚಿತ್ರ ಸದ್ಯಕ್ಕೆ ಬಿಡುಗಡೆಯ ಹಂತದಲ್ಲಿದ್ದು, ಈ ಜೋಡಿ ಈಗ ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಿದ್ದಾರೆ. ಆ ವೇಳೆ ಟೈಗರ್ ಜತೆ ಡೇಟಿಂಗ್‌ ಕುರಿತು ದಿಶಾ ಅವರನ್ನು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ಅವರು,’ ಸಿನಿಮಾ ಥಿಯೇಟರ್‌, ರೆಸ್ಟೋರೆಂಟ್‌ಗಳಲ್ಲಿ ಜನರು ನಮ್ಮನ್ನು ನೋಡಿರುತ್ತಾರೆ. ಇದನ್ನೇ ಹಲವು ವಿಧಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಪರಿಣಾಮ ನಮ್ಮ ಪ್ರತಿಯೊಂದು ಚಲನವಲನಗಳ ಬಗ್ಗೆ ತಿಳಿದುಕೊಳ್ಳಲು ಜನರು ಆಸಕ್ತರಾಗುತ್ತಾರೆ. ಚಿತ್ರರಂಗದಲ್ಲಿ ನಂಗೆ ಯಾರು ಸ್ನೇಹಿತರಿಲ್ಲ. ಕೇವಲ ಟೈಗರ್ ಶ್ರಾಫ್ ಮಾತ್ರ ಗುಡ್ ಫ್ರೆಂಡ್‌. ಅವರ ಹಾಗೂ ನನ್ನ ನಡುವೆ ನಿಷ್ಕಾಮ ಸ್ನೇಹವಿದೆ. ಅವರು ತುಂಬ ವಿನಮ್ರ ಹಾಗೂ ಪರೋಪಕಾರಿ ಜೀವಿ. ಇದು ಅವರ ಕುಟುಂಬದಿಂದ ಬಂದಿದೆ’ ಎಂದು ಟೈಗರ್ ಶ್ರಾಫ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments