ಟಗರು ಚಿತ್ರದಲ್ಲಿ ನಟಿಸಿದ ಮೇಲೆ ನಟಿ ಮಾನ್ವಿತಾ ರವರಿಗೆ ಡಿಮಾಂಡ್ ಹೆಚ್ಚಾಗಿದೆ ಎನ್ನುವುದಕ್ಕೆ ಇದೇ ಕಾರಣವಂತೆ!

Webdunia
ಶುಕ್ರವಾರ, 30 ಮಾರ್ಚ್ 2018 (10:27 IST)
ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ  ಟಗರು ಚಿತ್ರದಲ್ಲಿ ನಟಿಸಿದ ಮೇಲೆ ನಟಿ ಮಾನ್ವಿತಾ ಅವರಿಗೆ ಡಿಮಾಂಡ್ ಹೆಚ್ಚಾಗಿದೆ. ಯಾಕೆಂದರೆ ಖ್ಯಾತ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಅವರು ಇತ್ತಿಚಿಗೆ ಈ ಚಿತ್ರವನ್ನು ವೀಕ್ಷಿಸಿ ಮಾನ್ವಿತಾ ಅವರ ನಟನೆಯನ್ನು ಮೆಚ್ಚಿಕೊಂಡಿದ್ದಲ್ಲದೆ ತಮ್ಮ ಮುಂದಿನ ಚಿತ್ರಕ್ಕೆ ಸೈನ್ ಕೂಡ ಮಾಡಿಸಿಕೊಂಡಿದ್ದಾರೆ.


`ಟಗರು’ ಚಿತ್ರ ನೋಡೋದಕ್ಕಾಗಿಯೇ ಬೆಂಗಳೂರಿಗೆ ಆಗಮಿಸಿದ್ದ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಅವರು ಖಾಸಗಿ ಮಾಲ್‍ವೊಂದರಲ್ಲಿ ನಿರ್ದೇಶಕ ಸೂರಿ, ನಟ ಧನಂಜಯ್, ನಟಿ ಮಾನ್ವಿತಾ ಜೊತೆ ಚಿತ್ರ ನೋಡಿ ಚಿತ್ರತಂಡದವರನ್ನು ಕೊಂಡಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ  ಅವರು,’ ಈ ರೀತಿ ಸ್ಕ್ರೀನ್‍ಪ್ಲೇ ಇರೋ ಚಿತ್ರವನ್ನು ಇದುವರೆಗೂ ನನ್ನ ಜೀವನದಲ್ಲಿ ನೋಡೇ ಇಲ್ಲ. ಮಾನ್ವಿತಾ ಹರೀಶ್ ಒಬ್ಬ ನಟಿಯಲ್ಲ. ಆಕೆ ಎಲೆಕ್ಟ್ರಿಸಿಟಿ ಇದ್ದಂತೆ. ತನ್ನ ಸಾಮಥ್ರ್ಯದಿಂದಲೇ ಎಲ್ಲರಿಗೂ ಶಾಕ್ ನೀಡುತ್ತಾರೆ. ಇನ್ನೂ ಧನಂನಜಯ್ ನಟನೆ ಎಲ್ಲರನ್ನೂ ಬೆದರಿಸುವಂತಿದೆ ಎಂದು ತಿಳಿಸಿದ್ದಾರೆ.


ಹಾಗೇ ಮತ್ತೊಂದು ಟ್ವೀಟ್ ಮಾಡಿ,’ ಟಗರು ಸಿನಿಮಾ ವೀಕ್ಷಿಸಿದ ನಂತರ ನಾನು ಮಾನ್ವಿತಾ ಹರೀಶ್ ಅವರಿಗೆ ಮೊದಲೇ ಟೋಕನ್ ಅಡ್ವಾನ್ಸ್ ನೀಡಿ ಸಿನಿಮಾಗೆ ಸೈನ್ ಮಾಡಿಸಿಕೊಂಡಿದ್ದೇನೆ. ಆ ಕಮಿಂಟ್‍ಮೆಂಟ್‍ಯಿಂದ ನಾನು ಅವರಿಗೆ 10 ಲಕ್ಷ ರೂ. ನೀಡುತ್ತೇನೆ. ಇಲ್ಲವೆಂದರೆ ಅವರು ಕೇಳಿದಷ್ಟು ಕೊಡುತ್ತೇನೆ. ಅಷ್ಟೇ ಅಲ್ಲದೇ ನಿರ್ದೇಶಕ ಸೂರಿ ಅವರನ್ನು ನಾನು ನಿರ್ಮಿಸುವ ಚಿತ್ರವನ್ನು ನಿರ್ದೇಶನ ಮಾಡಬೇಕಾಗಿ ಕೇಳಿಕೊಂಡಿದ್ದೇನೆ ಎಂದು ರಾಮ್‍ಗೋಪಾಲ್ ವರ್ಮಾ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments