Select Your Language

Notifications

webdunia
webdunia
webdunia
webdunia

ಟಗರು ಚಿತ್ರದ ಪ್ರಮೋಷನ್‍ಗಾಗಿ ನಟ ಶಿವರಾಜ್ ಕುಮಾರ್

ಟಗರು ಚಿತ್ರದ ಪ್ರಮೋಷನ್‍ಗಾಗಿ ನಟ ಶಿವರಾಜ್ ಕುಮಾರ್
ಚಿಕ್ಕಮಗಳೂರು , ಸೋಮವಾರ, 26 ಮಾರ್ಚ್ 2018 (13:12 IST)
ಚಿಕ್ಕಮಗಳೂರು : ಟಗರು ಚಿತ್ರದ ಪ್ರಮೋಷನ್‍ಗಾಗಿ ನಟ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ಚಿಕ್ಕಮಗಳೂರಿಗೆ ಆಗಮಿಸಿದ್ರು. ಸಂಜೆ 4 ಗಂಟೆಗೆ ಬಂದ ಶಿವಣ್ಣ ಹಾಗೂ ಧನಂಜಯ್ ಚಿಕ್ಕಮಗಳೂರು ದ್ ಪಾರ್ಕ್ ವೃತ್ತದಿಂದ ರೋಡ್ ಶೋ ಮೂಲಕ ಮಿಲನ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡರು. 
ಶಿವರಾಜ್ ಕುಮಾರ್ ಬರ್ತಾರೆಂದು ಅಭಿಮಾನಿಗಳು ಮೂರು ಗಂಟೆಯಿಂದಲೇ ಆಜಾದ್ ಪಾರ್ಕ್ ವೃತ್ತದಲ್ಲಿ ಡ್ರಮ್ ಸೆಟ್ ಭಾರಿಸಿಕೊಂಡು ಕುಣಿದು ಕುಪ್ಪಳಿಸಿದ್ರು. ಶಿವಣ್ಣ ಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ರು. ತೆರೆದ ವಾಹನದ ಮೇಲೆಯೇ ಹತ್ತಿ ಸೆಲ್ಫಿ ತೆಗೆದುಕೊಂಡ್ರು
 
ಶಿವಣ್ಣ ಥಿಯೇಟರ್ ಬಳಿ ಆಗಮಿಸುತ್ತಿದ್ದಂತೆ ನೂರಾರು ಯುವಕರು ಕುಣಿದು ಕುಪ್ಪಳಿಸಿದ್ರು. ಶಿವಣ್ಣ ಜೊತೆಯೇ ಟಾಕೀಸ್ ಪ್ರವೇಶಿಸಲು ಯತ್ನಿಸಿದ ಅಭಿಮಾನಿಗಳನ್ನ ನಿಯಂತ್ರಿಸೋದಕ್ಕೆ ಪೊಲೀಸರು ಹರ ಸಾಹಸಪಟ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ದೀಪಿಕಾ ಹಾಗೂ ಪ್ರಿಯಾಂಕ ಯಾವ ವಿಷಯಕ್ಕಾಗಿ ಪೈಪೋಟಿ ಬಿದ್ದಿದ್ದಾರೆ ಗೊತ್ತಾ…?