Webdunia - Bharat's app for daily news and videos

Install App

ಪ್ರಿಯಾಂಕ ಮದುವೆ ಕುರಿತು ಶಾರೂಕ್ ಖಾನ್ ಹೀಗ್ಯಾಕೆ ಹೇಳಿದ್ರು!

Webdunia
ಶನಿವಾರ, 4 ಆಗಸ್ಟ್ 2018 (07:56 IST)
ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಮದುವೆ ಆಗಲಿದ್ದಾರೆ, ಹಾಗಾಗಿ ಆಕೆ ‘ಭಾರತ್’ ಸಿನಿಮಾದಿಂದ ಹೊರಗುಳಿದಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಣದಲ್ಲಿ ಕೇಳಿಬರುತ್ತಿತ್ತು. ತಮ್ಮ ಮದುವೆಯ ಬಗ್ಗೆ ಇಷ್ಟೆಲ್ಲಾ ಸುದ್ದಿ ಆಗುತ್ತಿದ್ದರೂ, ಪ್ರಿಯಾಂಕಾ ಛೋಪ್ರಾ ಏನೊಂದು ಮಾತು ಕೂಡ ಆಡಲಿಲ್ಲ. ಹಾಗೇ ಪ್ರಿಯಾಂಕಾ ಕುಟುಂಬ ಕೂಡ ಈ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ.


ಇನ್ನು ಪ್ರಿಯಾಂಕಾ ಮದುವೆ ಕುರಿತು ಶಾರೂಕ್ ಖಾನ್ ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗಿದೆ ನೋಡಿ 'ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಮದುವೆ ಆಗ್ತಿರೋದು ನಿಜವೇ.?' ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಾರೂಕ್ ಖಾನ್ 'ನಾನೂ ಕೂಡ ಮದುವೆ ಆಗುತ್ತಿರುವೆ. ಸದ್ಯದಲ್ಲಿಯೇ ಆಹ್ವಾನ ಪತ್ರಿಕೆ ನೀಡುವೆ. ರಿಸೆಪ್ಷನ್ ಗೂ ಇನ್ವೈಟ್ ಮಾಡುವೆ. ತಪ್ಪದೆ ಮೆಹಂದಿ ಕಾರ್ಯಕ್ರಮಕ್ಕೂ ಬನ್ನಿ' ಎಂದು ಹೇಳಿದ್ದಾರೆ ಶಾರುಖ್ ಖಾನ್.

ಪ್ರಿಯಾಂಕಾ ಮದುವೆ ಸುದ್ದಿಯನ್ನ ಶಾರುಖ್  ಖಾನ್ ಖಚಿತ ಪಡಿಸಿಲ್ಲ, ಹಾಗೇ ತಳ್ಳಿಯೂ ಹಾಕಿಲ್ಲ. ಪ್ರಿಯಾಂಕಾ ಮದುವೆ ಮ್ಯಾಟರ್ ಬಿಟ್ಟು ತಮ್ಮ ಮದುವೆ ಅಂತ ಹಾಸ್ಯ ಚಟಾಕಿ ಹಾರಿಸಿದ್ದಾರೆ ಶಾರುಖ್.

ಇಕನ್ನು ವರದಿಗಳ ಪ್ರಕಾರ, ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ನಿಶ್ಚಿತಾರ್ಥ ಮುಗಿದು ಹೋಗಿದೆ. ಪ್ರಿಯಾಂಕಾ ಹುಟ್ಟುಹಬ್ಬದ ದಿನವೇ, ಆಕೆಯ ಬೆರಳಿಗೆ ನಿಕ್ ಉಂಗುರ ತೊಡಿಸಿದರಂತೆ. ಇನ್ನೂ ಈ ವರ್ಷದ ಸೆಪ್ಟೆಂಬರ್ ನಲ್ಲಿ ಪ್ರಿಯಾಂಕಾ-ನಿಕ್ ಮದುವೆ ಎಂಬ ಸುದ್ದಿ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೋರ್ಸ್ ವದಂತಿ ಬೆನ್ನಲ್ಲೇ ಗಣೇಶ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ನಟ ಗೋವಿಂದ ದಂಪತಿ

ಹುಂಡೈ ವಾಹನದಲ್ಲಿ ಪದೇ ಪದೇ ಸಮಸ್ಯೆ, ನಟ ಶಾರುಖ್‌, ದೀಪಿಕಾ ವಿರುದ್ಧ ಬಿತ್ತು ಕೇಸ್‌, ಯಾಕೆ ಗೊತ್ತಾ

ಗಣೇಶ ಹಬ್ಬಕ್ಕೆ ಈ ಬಾರಿಯೂ ಜೈಲಿನಲ್ಲೇ ದಾಸ : ಪತ್ನಿ ವಿಜಯಲಕ್ಷ್ಮಿ ಏನ್ ಮಾಡಿದ್ರೂ ಗೊತ್ತಾ

ಬರ್ತ್ ಡೇಗೆ ಮನೆ ಬಳಿ ಬರಬೇಡಿ ಎಂದಿಲ್ಲ ಕಿಚ್ಚ ಸುದೀಪ್: ಫ್ಯಾನ್ಸ್ ಗೆ ದೊಡ್ಡ ಸರ್ಪ್ರೈಸ್

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

ಮುಂದಿನ ಸುದ್ದಿ
Show comments