Select Your Language

Notifications

webdunia
webdunia
webdunia
webdunia

ಪ್ರಕಾಶ ರೈ ಬಗ್ಗೆ ಅಮಿತಾಭ್ ಬಚ್ಚನ್ ಹೇಳಿದ್ದಾರೂ ಏನು ಗೊತ್ತಾ...?

ಪ್ರಕಾಶ ರೈ ಬಗ್ಗೆ ಅಮಿತಾಭ್ ಬಚ್ಚನ್  ಹೇಳಿದ್ದಾರೂ ಏನು ಗೊತ್ತಾ...?
ಮುಂಬೈ , ಶುಕ್ರವಾರ, 29 ಡಿಸೆಂಬರ್ 2017 (07:30 IST)
ಮುಂಬೈ: ಅಭಿನಯದ ಮೂಲಕ ಜನರ ಮನಗೆದ್ದ ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ಪ್ರಕಾಶ ರೈ ಅವರ ಅಭಿನಯ ನೋಡಿ ಬೆರಗಾಗಿದ್ದಾರೆ.


ಅವರ ಅಭಿನಯ ಎಷ್ಟರಮಟ್ಟಿಗೆ ಇತ್ತು ಎಂದರೆ ಒಂದು ವೇಳೆ ಈ ವ್ಯಕ್ತಿ ಹಿಂದಿ ಸಿನಿಮಾರಂಗದಲ್ಲಿ ಇದ್ದುಬಿಟ್ಟಿದ್ದರೆ ತಾವು ಇಷ್ಟು ಫೇಮಸ್ ಆಗುತ್ತಿರಲಿಲ್ಲ ಎಂದು ನಟ ಅಮಿತಾಭ್ ಬಚ್ಚನ್ ಅವರು ಪ್ರಕಾಶ ರೈ ಅವರ ಅಭಿನಯ ನೋಡಿ ಹೊಗಳಿದ್ದಾರೆ.


ಪ್ರಕಾಶ್ ರೈ ಅವರು ಒಬ್ಬ ಉತ್ತಮ ನಟರಾಗಿದ್ದು ಇವರು ತಮ್ಮ ಅಮೋಘ ಅಭಿನಯಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಇರುವರ್’ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟ, ‘ಅಂತಃಪುರಂ’, ‘ದಯಾ’, ‘ಕಾಂಚಿವರಂ’ ಚಿತ್ರಕ್ಕೆ  ಅತ್ಯುತ್ತಮ ನಟ, ಹಾಗು ‘ಪುಟ್ಟಕ್ಕನ ಹೈವೆ’ ಎಂಬ ಕನ್ನಡ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರದ ನಿರ್ಮಾಪಕ ಪ್ರಶಸ್ತಿ  ಹೀಗೆ ಇನ್ನೂ ಹಲವು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಂಬಣ್ಣ ಚಿತ್ರದ ನಾಯಕ ನಟನ ವಿರುದ್ಧ ಅತ್ಯಾಚಾರ ಪ್ರಕರಣ