Select Your Language

Notifications

webdunia
webdunia
webdunia
webdunia

ಟೈಗರ್ ಶ್ರಾಫ್ ಎನರ್ಜಿ ಲೆವೆಲ್ ನಿಭಾಯಿಸುವುದು ಕಷ್ಟ: ದಿಶಾ ಪಟಾನಿ

ಟೈಗರ್ ಶ್ರಾಫ್ ಎನರ್ಜಿ ಲೆವೆಲ್ ನಿಭಾಯಿಸುವುದು ಕಷ್ಟ: ದಿಶಾ ಪಟಾನಿ

ನಾಗಶ್ರೀ ಭಟ್

ಬೆಂಗಳೂರು , ಶನಿವಾರ, 17 ಫೆಬ್ರವರಿ 2018 (12:40 IST)
ತನ್ನ ಬಿಡುಗಡೆಯಾಗಲಿರುವ ಚಿತ್ರ 'ಭಾಗಿ 2' ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ದಿಶಾ ಪಟಾನಿ ತಮ್ಮ ಸಹ-ನಟ ಟೈಗರ್ ಶ್ರಾಫ್ ಅವರ ಎನರ್ಜಿ ಲೆವೆಲ್ ಅನ್ನು ನಿಭಾಯಿಸುವುದು ಕಷ್ಟ ಎಂದು ಹೇಳಿದ್ದಾರೆ.
ಪ್ರಸ್ತುತ ಹಿಂದಿ ಚಿತ್ರರಂಗದಲ್ಲಿ ಟೈಗರ್ ಶ್ರಾಫ್ ಅವರನ್ನು ಅತ್ಯುತ್ತಮ ಡ್ಯಾನ್ಸರ್ ಎಂದು ಪರಿಗಣಿಸಲಾಗುತ್ತದೆ. 'ಭಾಗಿ 2' ಚಿತ್ರದಲ್ಲಿ ಟೈಗರ್ ಶ್ರಾಫ್ ಅವರೊಂದಿಗಿನ ನೃತ್ಯದ ಅನುಭವದ ಬಗ್ಗೆ ಕೇಳಿದಾಗ, " 'ಭಾಗಿ 2' ಗಾಗಿ ನಾನು ತುಂಬಾ ಉತ್ಸುಕಳಾಗಿದ್ದೇನೆ. ಟ್ರೇಲರ್ ಫೆಬ್ರವರಿ 21 ರಂದು ಬರಲಿದೆ, ಹಾಗಾಗಿ ಏನಾಗುತ್ತದೆ ಎಂದು ನೋಡೋಣ. ನಮ್ಮ ಚಿತ್ರದ ಟ್ರೇಲರ್ ನೋಡಲು ನನಗೆ ಕಾಯಲು ಸಾಧ್ಯವಾಗುತ್ತಿಲ್ಲ" ಎಂದು ತಮ್ಮ ಸಂತೋಷವನ್ನು ಮಾಧ್ಯಮದೊಂದಿಗೆ ಹಂಚಿಕೊಂಡರು.
 
"ಅವರು ತುಂಬಾ ಶ್ರಮವಹಿಸಿ ಕೆಲಸ ಮಾಡುವುದರಿಂದ ನಾನೂ ಸಹ ತುಂಬಾ ಶ್ರಮವಹಿಸಬೇಕಾಯಿತು, ಏಕೆಂದರೆ ಅವರ ಎನರ್ಜಿ ಮಟ್ಟವನ್ನು ನಾನು ನಿಭಾಯಿಸುವುದು ತುಂಬಾ ಕಷ್ಟವಾಗಿತ್ತು. ಆದರೆ ನಾವು ಉತ್ತಮ ಬಾಂಧವ್ಯವನ್ನು ಹೊಂದಿದ್ದೇವೆ ಮತ್ತು ನಾನು ಅದನ್ನು ನಿರ್ವಹಿಸಿದ್ದೇನೆ" ಎಂದು ಚಿತ್ರದಲ್ಲಿ ಟೈಗರ್ ಶ್ರಾಫ್ ಮತ್ತು ತಮ್ಮ ಶ್ರಮದ ಬಗ್ಗೆ ಹೇಳಿಕೊಂಡರು. 'ಭಾಗಿ 2' ಚಿತ್ರದ ನಿರ್ದೇಶಕ ಅಹಮದ್ ಖಾನ್ ಅವರ ಕುರಿತು ಹೇಳುತ್ತಾ "ಅವರೊಂದು ಅದ್ಭುತ ಮತ್ತು ಪ್ರಿಯವಾದ ವ್ಯಕ್ತಿ. ನಾನು ಚಿತ್ರದಲ್ಲಿ ಏನೇ ಅಭಿನಯಿಸಿದ್ದರೂ ಅದು ಅವರಿಂದಾಗಿ" ಎಂದು ಹೇಳುತ್ತಾರೆ.
 
ದಿಶಾ ಪಟಾನಿ ತಮ್ಮ ನೃತ್ಯ ಕೌಶಲಗಳಿಗೆ ಹೆಸರುವಾಸಿಯಾಗಿದ್ದು, ದಿನನಿತ್ಯದ ವ್ಯಾಯಾಮದೊಂದಿಗೆ ನೃತ್ಯವನ್ನೂ ಸಹ ಸೇರಿಸಿಕೊಂಡಿದ್ದಾರೆ. ಅವರು ಯಾವಾಗಲೂ ತಮ್ಮ ನೃತ್ಯದ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ತಮ್ಮ ನೃತ್ಯದ ಕುರಿತು ಹೇಳುತ್ತಾ "ನಾನು ಇದನ್ನು ಹವ್ಯಾಸವಾಗಿ ಮಾಡುತ್ತೇನೆ. ನಾನು ನೃತ್ಯವನ್ನು ಇಷ್ಟಪಡುತ್ತೇನೆ ಮತ್ತು ವಿವಿಧ ಪ್ರಕಾರದ ನೃತ್ಯಗಳನ್ನು ಕಲಿಯಲು ಬಯಸುತ್ತೇನೆ" ಎಂದು ಹೇಳುತ್ತಾರೆ. ದಿಶಾ ಅವರ ವ್ಯಕ್ತಿತ್ವದಲ್ಲಿರುವ ಋಣಾತ್ಮಕ ವಿಷಯದ ಕುರಿತು ಕೇಳಿದಾಗ, "ನಾನು ಸಾಮಾಜಿಕವಾಗಿ ತುಂಬಾ ವಿಚಿತ್ರವಾಗಿದ್ದೇನೆ ಆದರೆ ನಾನು ಅದನ್ನು ಚೆನ್ನಾಗಿ ನಕಲು ಮಾಡಬಹುದು" ಎಂದು ಹೇಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೈಲ್ವಾನ್ ಲುಕ್ ಗಾಗಿ ಕಿಚ್ಚ ಸುದೀಪ್ ಎಷ್ಟು ಕಷ್ಟಪಡುತ್ತಿದ್ದಾರೆ ನೀವೇ ನೋಡಿ!